ಹಳಿಯಾಳ: ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದಜಿಲ್ಲಾಧ್ಯಕ್ಷರು, ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ದಿ. ಶ್ರೀಕಾಂತ ಹೂಲಿ ಅವರಿಗೆ ಮರಣೋತ್ತರ ಮಹಾ ದಾಸೋಹಿ ಸೇವಾ ಪ್ರಶಸ್ತಿ ಲಭಿಸಿದ್ದು ಶ್ರೀಕ್ಷೇತ್ರ ಉಳವಿಯಲ್ಲಿ ನಡೆದಕಾರ್ಯಕ್ರಮದಲ್ಲಿ ದಿವಂಗತ ಹೂಲಿ ಅವರ ಮಗ ಹಳಿಯಾಳ ಪುರಸಭೆ ಬಿಜೆಪಿ ಸದಸ್ಯಉದಯ ಹೂಲಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಗದ್ಗುರು ಮಡಿವಾಳೇಶ್ವರ ಕಲ್ಮಠಟ್ರಸ್ಟ್ ಹಾಗೂ ಉಳವಿ ಪಾದಯಾತ್ರೆ ಸಮಿತಿಗರಗ-ಹಂಗರಕಿಇವರು ಈ ಬಾರಿ ಕೈಗೊಂಡ 5ನೇ ವರ್ಷದ ಶ್ರೀಕ್ಷೇತ್ರ ಉಳವಿ ಪಾದಯಾತ್ರೆ ಅಂಗವಾಗಿ ಈ ಹಿಂದೆ ಉಳವಿ ಪಾದಯಾತ್ರೆ ಆರಂಭಿಸಿದ್ದ ದಿ.ಶ್ರೀಕಾಂತ ಹೂಲಿ ಅವರ ಕಾರ್ಯಕ್ಕೆ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ಘೋಷಿಸಲಾಗಿದೆ.
ಉಳವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಧಾರವಾಡ ಗ್ರಾಮೀಣ ಮತಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಮುಂದಾಳತ್ವದಲ್ಲಿ ಶ್ರೀಕ್ಷೇತ್ರ ಉಳವಿಯ ದೇವಸ್ಥಾನ ಆವರಣದಲ್ಲಿ ದಿ. ಶ್ರೀಕಾಂತ ಅವರ ಪುತ್ರ ಪುರಸಭೆ ಸದಸ್ಯ ಉದಯ ಹೂಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮನಗುಂಡಿ ಮಠದ ಬಸವಾನಂದ ಮಹಾಸ್ವಾಮಿಗಳು, ಉಳವಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕರಯ್ಯಾ ಶಾಸ್ತ್ರೀ, ಮಡಿವಾಳೇಶ್ವರ ಕಲ್ಮಠ ಮಠದ ಸ್ವಾಮಿಗಳು, ಕಾರ್ಯಾಧ್ಯಕ್ಷ ಅಶೋಕ್ ದೇಸಾಯಿ, ಶಿವು ದೇಸಾಯಿ ಸ್ವಾಮಿ, ಡಾ.ಸಿಎಸ್ ಓಶಿಮಠ ಸಮಾಜದ ಪ್ರಮುಖರು ಇದ್ದರು.