ಅಂಕೋಲಾ: ವಿಧಾನ ಪರಿಷತ್ ಚುನಾವಣೆಗೆ ನೂತನವಾಗಿ ಆಯ್ಕೆಯಾದ ಗಣಪತಿ ಉಳ್ವೇಕರ ಹಾಗೂ ಶಾಸಕಿ ರೂಪಾಲಿ ನಾಯ್ಕ ಮಂಗಳವಾರ ಅಂಕೋಲಾದ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿಜಯೋತ್ಸವ ಆಚರಿಸಿದರು.
ವಿಧಾನ ಪರಿಷತ್ ನೂತನ ಸದಸ್ಯ ಗಣಪತಿ ಉಳ್ವೇಕರರನ್ನು ಪಕ್ಷದ ಕಾರ್ಯಕರ್ತರು, ವಿವಿಧ ಪಂಚಾಯತದ ಪ್ರಮುಖರು, ಪುರಸಭೆ ಸದಸ್ಯರು, ವಕೀಲರು, ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗಣಪತಿ ಉಳ್ವೇಕರ ಮಾತನಾಡಿ, ತಮ್ಮ ಗೆಲುವಿಗೆ ಶ್ರಮಿಸಿದ ಸರ್ವರನ್ನೂ ಅಭಿನಂದಿಸಿದರು ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಸ್ಯೆಗಳೇನೆ ಇದ್ದರೂ ಜಿಲ್ಲೆಯ ಜನರ ಧ್ವನಿಯಾಗಿ ಪರಿಷತ್‍ನಲ್ಲಿ ಧ್ವನಿ ಎತ್ತುತ್ತೇನೆ ಎಂದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಗಣಪತಿ ಉಳ್ವೇಕರ ಗೆಲುವಿಗೆ ಪಕ್ಷದ ಎಲ್ಲರೂ ಶ್ರಮಿಸಿದ್ದಾರೆ. ಈ ಗೆಲುವು ಮುಂದಿನ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಸೂಚನೆಯಾಗಿದೆ ಎಂದರು.
ಪ್ರಮುಖರಾದ ರಾಜೇಂದ್ರ ನಾಯ್ಕ, ಭಾಸ್ಕರ ನಾರ್ವೇಕರ, ಸಂಜಯ ನಾಯ್ಕ, ಪ್ರಶಾಂತ ನಾಯಕ, ಜಗದೀಶ ನಾಯಕ, ಶಾಂತಲಾ ನಾಡಕರ್ಣಿ, ರೇಖಾ ಗಾಂವಕರ, ಚಂದ್ರಕಾಂತ ನಾಯ್ಕ, ಬಿಂದೇಶ ನಾಯಕ, ಸವಿತಾ ಬಾನಾವಳಿಕರ, ದಾಮು ರಾಯ್ಕರ, ಮಾರುತಿ ಗೌಡ, ನಾಗೇಶ ಕಿಣಿ, ಸೂರಜ ನಾಯ್ಕ, ತಾರಾ ನಾಯ್ಕ, ಅನುರಾಧಾ ನಾಯ್ಕ, ತಾರಾ ಗಾಂವಕರ ಇನ್ನಿತರರು ಉಪಸ್ಥಿತರಿದ್ದರು.