• first
  second
  third
  previous arrow
  next arrow
 • ಡಾ.ನಂದಕುಮಾರ ಪೈ ದಂಪತಿಗೆ ಸನ್ಮಾನ

  300x250 AD

  ಸಿದ್ದಾಪುರ: ಪಶುವೈದ್ಯರಾಗಿ ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಡಾ.ನಂದಕುಮಾರ ಪೈ ಅವರು ಬಹುಮುಖ ಪ್ರತಿಭೆ ಉಳ್ಳವರಾಗಿದ್ದಾರೆ ಎಂದು ಪ್ರಗತಿಪರ ಕೃಷಿಕ ಶ್ರೀಪಾದ ಹೆಗಡೆ ಬಕ್ಕೆಮನೆ ಹೇಳಿದರು.

  ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಗೆಳೆಯರ ಬಳಗ ಹಾರ್ಸಿಕಟ್ಟಾ ಹಾಗೂ ದಿವಾನ್ ಯಕ್ಷಸಮೂಹದವರು ವ್ಯವಸಾಯ ಸೇವಾ ಸಹಕಾರಿ ಸಂಘ ಹಾರ್ಸಿಕಟ್ಟಾ ಮತ್ತು ಗಜಾನನೋತ್ಸವ ಸಮಿತಿ ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಪಶುಸಂಗೋಪನಾ ಇಲಾಖೆಯಲ್ಲಿ ಜಿಲ್ಲಾ ಉಪನಿರ್ದೇಶಕರಾಗಿ ನಿವೃತಿ ಹೊಂದಿದ ಡಾ.ನಂದಕುಮಾರ ಪೈ ದಂಪತಿಯನ್ನು ಸನ್ಮಾನಿಸಿ ಅವರು ಶನಿವಾರ ಮಾತನಾಡಿದರು.

  300x250 AD

  ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ನಂದಕುಮಾರ ಪೈ ಅವರು ತಮ್ಮ ಸೇವೆಯ ಅರ್ಧದಷ್ಟು ವರ್ಷವನ್ನು ಹಾರ್ಸಿಕಟ್ಟಾದಲ್ಲಿಯೇ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನಲ್ಲಿರುವ ಕ್ರಿಯಾಶೀಲತೆಯನ್ನು ಇಲ್ಲಿಯ ಜನತೆ ಗುರುತಿಸಿ ಪ್ರೋತ್ಸಾಹಿಸಿದ್ದಾರೆ ಎಂದರು.
  ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ.ಹೆಗಡೆ ಅಧ್ಯಕ್ಷತೆವಹಿಸಿದ್ದರು. ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಡಿ.ಭಟ್ಟ ಅಗ್ಗೇರೆ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಭಟ್ಟ ಮಾಣಿಕ್ನಮನೆ, ಅನಂತ ಶಾನಭಾಗ, ನರಹರಿ ಹೆಗಡೆ ಕರ್ಕಿಸವಲ್, ದಿನೇಶ ಹೆಗಡೆ, ಶ್ರೀಕಾಂತ ಶಾನಭಾಗ, ಸಿ.ಎನ್.ಹೆಗಡೆ, ವಸುಮತಿ ಹೆಗಡೆ ಇತರರಿದ್ದರು. ರಮೇಶ ಹೆಗಡೆ ಹಾರ್ಸಿಮನೆ, ದಿನೇಶ ಹೆಗಡೆ ಚಳ್ಳೆಹದ್ದ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Back to top