ಜೊಯಿಡಾ: ಸಂಜೀವಿನಿ ಸೇವಾ ಟ್ರಸ್ಟ್, ಜೋಯಿಡಾ, ಕ್ರೂಗರ ಫೌಂಡೇಶನ, ಕಾರವಾರ, ಎಕಲ ಅಭಿಯಾನ, ಬೆಳಗಾವಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ, ಬೆಳಗಾವಿ ಇವರ ಆಶ್ರಯದಲ್ಲಿ ಹುಡಸಾ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕಾರ್ಯಕ್ರಮ ನಡೆಯಿತು.ಸಂಜೀವಿನಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ರವಿ ರೇಡ್ಕರ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿಯ ವೈದ್ಯೆ ಶೈಲಜಾ ಕಿತ್ತೂರ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಜೀವನಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಸುನೀಲ ದೇಸಾಯಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ ಸದಸ್ಯ ಡಾ. ರವೀಂದ್ರ ಅನಗೋಳ ಭಾಗವಹಿಸಿದ್ದರು.
ಒಟ್ಟು ೯೩ ಜನರನ್ನು ತಪಾಸಣೆ ನಡೆಸಿ. ಅವುರ್ಲಿಯ ಓರ್ವ ಮಹಿಳೆಗೆ ಹರ್ನಿಯಾ ಕಾಯಿಲೆ ಕುರಿತು ತುರ್ತಾಗಿ ಕಾರವಾರ ಜಿಲ್ಲಾ ಆಸ್ಪತೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ವ್ಯವಸ್ಥೆ ಮಾಡಿಸಲಾಯಿತು. ಬಂದಂತಹ ಅತಿಥಿಗಳಿಗೆ ಅಡಿಕೆ ಸಸಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳ ತಜ್ಞೆ ಡಾ. ರಾಜಶ್ರೀ ಅನಗೋಳ, ಸ್ತ್ರೀ ರೋಗ ತಜ್ಞೆ ಡಾ. ಮೀನಾ ಪಾಟೀಲ್, ಡಾ. ಸುರೇಖಾ ಕೋಟೆ, ಡಾ. ರವೀಂದ್ರ ಅನಗೋಳ, ಕಾಳಿ ಬ್ರಿಗೇಡ್ ಅಧ್ಯಕ್ಷ ಸತೀಶ ನಾಯ್ಕ, ಗ್ರಾ. ಪಂ. ಸದಸ್ಯ ರೂಪೇಶ ದೇಸಾಯಿ, ಶಾಲಾ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ಟ, ಸಂಜೀವಿನಿ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಸುನೀಲ ದೇಸಾಯಿ, ಜಯಾನಂದ ಡೇರೆಕರ, ಜಯಂತ ಗಾವಡಾ, ಗಣೇಶ ವಿರಕ್ತಮಠ, ಈಶ್ವರ ವಡ್ಡರ, ಪ್ರಭಾಕರ ನಾಯ್ಕ, ಮ್ಹಾಬಳು ದೇಸಾಯಿ, ಸುರೇಖಾ ನಾಯ್ಕ, ರಾಜೇಶ ದೇಸಾಯಿ, ದಿನೇಶ ದೇಸಾಯಿ, ವಿನಾಯಕ ಕರಂಜೋಳಕರ, ಸ್ವಪ್ನಿಲ್ ದೇಸಾಯಿ, ಪ್ರಿಯಾಂಕಾ ದೇಸಾಯಿ, ರೂಪಾ ದೇಸಾಯಿ, ಪೂಜಾ ದೇಸಾಯಿ, ಐಶ್ವರ್ಯಾ ದೇಸಾಯಿ, ಕಾಂಚಾನಾ ದೇಸಾಯಿ, ಶೈಲಾ ದೇಸಾಯಿ, ರಶ್ಮಿ ರೇಡ್ಕರ, ರಕ್ಷೀತಾ ದೇಸಾಯಿ, ಪ್ರೀತೇಶ, ಸೋಮೇಶ ನಾಯ್ಕ, ಸೂರಜ್ ನಾಯ್ಕ, ಅಮೋಘ ಟೆಂಗ್ಸ್, ಹಾಗೂ ಹುಡಸಾ, ನಗರಿ, ಅವುರ್ಲಿ, ಮುಂತಾದ ಗ್ರಾಮದ ನೂರಾರು ಸಾರ್ವಜನರಿಕರು ಉಪಸ್ಥಿತರಿದ್ದರು.