• first
    second
    third
    previous arrow
    next arrow
  • ಗೆಲುವಿನ ಚಿಹ್ನೆ ತೋರಿ ಸಂಭ್ರಮಿಸಿದ ಉಳ್ವೇಕರ್; ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ ರೂಪಾಲಿ

    300x250 AD

    ಕಾರವಾರ: ಉತ್ತರ ಕನ್ನಡದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಮೊದಲ ಬಾರಿಗೆ ವಿಧಾನ ಪರಿಷತ್‌ಗೆ ಪ್ರವೇಶ ಪಡೆದಿದ್ದಾರೆ. ಅಭ್ಯರ್ಥಿ ಗಣಪತಿ ಉಳೇಕರ್ ಸುಮಾರು 183 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಒಟ್ಟು 2915 ಮತಗಳಲ್ಲಿ 2907 ಮತಗಳ ಚಲಾವಣೆಯಾಗಿತ್ತು. ಬಿಜೆಪಿಯ ಅಭ್ಯರ್ಥಿ ಗಣಪತಿ ಉಳೇಕರ್ 1514 ಮತ ಪಡೆದಿದ್ದು, ಕಾಂಗ್ರೆಸ್‌ನ ಭೀಮಣ್ಣ ನಾಯ್ಕ 1331 ಮತಗಳು ಪಡೆದು 183 ಮತಗಳ ಅಂತರದಿಂದ ರಾಜಕೀಯದಲ್ಲಿ ನಾಲ್ಕನೇ ಸೋಲನನ್ನುಭವಿಸಿದ್ದಾರೆ.

    14 ಟೇಬಲ್‌ಗಳಲ್ಲಿ 17 ಸುತ್ತಿಗೆ ಮತಗಳ ಎಣಿಕೆ ಕಾರ್ಯ ನಡೆಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾದ ಸೋಮಶೇಖರ 1, ಈಶ್ವರ ಗೌಡ 4,  ನಾಯ್ಕ 3 ಮತಗಳನ್ನು ಪಡೆದಿದ್ದಾರೆ. 54 ಮತಗಳು ತಿರಸ್ಕೃತವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಈ ಬಾರಿ ಮೀನುಗಾರ ಮುಖಂಡ ಗಣಪತಿ ಉಳೇಕರರನ್ನು ನಿಲ್ಲಿಸಿತ್ತು. 2016ರಲ್ಲಿ ಗಣಪತಿ ಅವರನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾಡಿತ್ತು. ಆಗ ಅವರು ಅತ್ಯಲ್ಪ (228) ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದರು. ಆದರೆ ಈ ಬಾರಿ ತೀವ್ರ ಹಣಾಹಣಿಯ ನಡುವೆ ಭೀಮ್ಮಣ್ಣಗೆ ಸೋಲುಣಿಸಿ, ಇವರು ಜಯಗಳಿಸಿದ್ದಾರೆ.

    300x250 AD

    ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳೇಕರ್ ಗೆಲುವು ಸಾಧಿಸುವ ಮೂಲಕ ಇತಿಹಾಸ ಸಾಧಿಸಿದ್ದು, ಇದೇ ಸಂಭ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಡ್ಯಾನ್ಸ್ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.

    ನಗರಸಭೆಯ ಮಹಿಳಾ ಸದಸ್ಯರೊಂದಿಗೆ ಸೇರಿಕೊಂಡು ಶಾಸಕಿ ರೂಪಾಲಿ ನಾಯ್ಕ ಕಾರವಾರದ ಮಾಲಾದೇವಿ ಮೈದಾನದಲ್ಲಿ ಡೊಳ್ಳು, ಡಿಜೆ ಕುಣಿತಕ್ಕೆ ನೃತ್ಯ ಮಾಡಿದ್ದಾರೆ.

    Share This
    300x250 AD
    300x250 AD
    300x250 AD
    Back to top