ಶಿರಸಿ: ಡಿ.10ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗಣಪತಿ ಉಳ್ವೆಕರ್ ಜಯ ಸಾಧಿಸಿದ್ದು ಭಾಜಪಾದಲ್ಲಿ ಹೊಸ ಸಂಚಲನ ಮೂಡಿಸಿದೆ.
ಒಟ್ಟೂ 2,907 ಮತಗಳ ಪೈಕಿ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಭೀಮಣ್ಣ ನಾಯ್ಕ 1,331 ಮತ ಪಡೆದು ಅತ್ಯುತ್ತಮ ಪೈಪೋಟಿ ನೀಡಿದರು. ಬಿಜೆಪಿಯ ಉಳ್ವೇಕರ್ 1514 ಮತ ಪಡೆಯುವುದರ ಮೂಲಕ, 183 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. 54 ಮತಗಳು ತಿರಸ್ಕರಿಸಲ್ಪಟ್ಟಿದೆ.
ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಾಲಾಗುತ್ತಿದ್ದ ವಿ.ಪ ಸ್ಥಾನವು ಈ ಬಾರಿ ಬಿ.ಜೆ.ಪಿ ಗೆ ಲಭಿಸಿದ್ದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ.