
ಕುಮಟಾ: ವಿ.ಆರ್.ದೇಶಪಾಂಡೆ ಟ್ರಸ್ಟ್ ವತಿಯಿಂದ ಕೊರೊನಾ ವಾರಿಯರ್ಸ್‍ಗಳಿಗೆ ನೀಡಲಾಗುವ ವಿವಿಧ ಸಾಮಗ್ರಿಗಳ ಅಗತ್ಯ ಕಿಟ್‍ಗಳನ್ನು ಮುಂಚೂಣಿ ಕೊರೊನಾ ವಾರಿಯರ್ಸ್‍ಗಳಾದ ತಾಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ದೃಶ್ಯ ಮತ್ತು ಮುದ್ರಣ ಮಾಧ್ಯಮದ ವರದಿಗಾರರಿಗೆ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಶನಿವಾರ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಹಸ್ತಾಂತರಿಸಿದರು.
ನಂತರ ಮಾತನಾಡಿ ಅವರು, ಮಾಜಿ ಉಸ್ತುವಾರಿ ಸಚಿವರು ಹಾಗೂ ನಮ್ಮ ಮುಖಂಡರಾದ ಆರ್.ವಿ.ದೇಶಪಾಂಡೆಯವರು ಹಾಗೂ ಯುವ ಮುಖಂಡ ಪ್ರಶಾಂತ ದೇಶಪಾಂಡೆಯವರು ಕೊರೊನಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶ್ರಮಿಸುತ್ತಿರುವರಿಗೆ ಪೆÇ್ರೀತ್ಸಾಹಿಸುವ ಉದ್ದೇಶದಿಂದ ಸಹಾಯ ಹಸ್ತ ಹಾಗೂ ಕೊರೊನಾ ಸೇನಾನಿಗಳಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಿ, ಬಡ ಜನತೆಗೆ ನೆರವಾಗುತ್ತಿದ್ದಾರೆ. ಅದೇರೀತಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಮುಂಚೂಣಿ ಕೊರೊನಾ ವಾರಿಯರ್ಸ್‍ಗಳಾದ 282 ಅಂಗನವಾಡಿ, 154 ಆಶಾ ಕಾರ್ಯಕರ್ತೆಯರು ಹಾಗೂ ಪತ್ರಿಕಾ ಮತ್ತು ಟಿ.ವಿ ವರದಿಗಾರರಿಗೆ ವಿವಿಧ ಸಾಮಗ್ರಿಗಳನ್ನೊಳಗೊಂಡ ಅಗತ್ಯ ಕಿಟ್‍ಗಳನ್ನು ವಿತರಿಸಿದ್ದಾರೆ ಎಂದ ಅವರು, ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ವಿವಿಧ ರೀತಿಯಲ್ಲಿ ಜಿಲ್ಲೆಯ ಬಡ ಜನರ ನೆರವಿಗೆ ಮುಂದಾದ ದೇಶಪಾಂಡೆ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಹಾಗೂ ಜಿ.ಪಂ.ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ಕೊರೊನಾ ಸೇನಾನಿಗಳನ್ನು ಗುರುತಿಸಿ, ಪೆÇ್ರೀತ್ಸಾಹಿಸುತ್ತಿರುವ ದೇಶಪಾಂಡೆ ಟ್ರಸ್ಟ್‍ನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮತ್ತು ಯುವ ಮುಖಂಡ ಪ್ರಶಾಂತ ದೇಶಪಾಂಡೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮುಜಾಫರ ಸಾಬ, ಪುರಸಭಾ ಸದಸ್ಯರಾದ ಎಂ.ಟಿ.ನಾಯ್ಕ, ವಿನಯಾ ಜಾರ್ಜ, ಲಕ್ಷ್ಮೀ ಗೊಂಡ, ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ನಾಗರತ್ನ ನಾಯಕ, ಪ್ರಮುಖರಾದ ಲಕ್ಷ್ಮೀ ಚಂದಾವರ್ಕರ, ಮೈಕೆಲ್ ರೊಡ್ರಗೀಸ್, ಸಚಿನ ನಾಯ್ಕ, ವೀಣಾ ನಾಯಕ, ಮನೋಜ ನಾಯಕ, ವಿನು ಜಾರ್ಜ, ನಿತ್ಯಾನಂದ ನಾಯ್ಕ, ದತ್ತು ಶೆಟ್ಟಿ, ಗಣೇಶ ಶೆಟ್ಟಿ, ವಿಜಯ ವೆರ್ಣೇಕರ, ರಾಘವೇಂದ್ರ ಗಾಡಿಗ ಸೇರಿದಂತೆ ಇತರರು ಇದ್ದರು