ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಕೆ.ಎಂ.ಸಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಾಲೆಜ್ ಅಪ್‍ಡೇಟ್ ಆನ್ ಸುಪರ್ ಸ್ಪೆಷಾಲಿಟಿ ಟಾಪಿಕ್ಸ್ ಈ ವಿಷಯದ ಕುರಿತು ಸಿಎಮ್‍ಇ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಕಟೀಲ್ ಸುರೇಶ್ ಕೊಡುವ, ಸಂಸ್ಥೆಯ ನಿರ್ದೇಶಕ ಡಾ. ಗಜಾನನ ನಾಯಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ್, ಭಾರತೀಯ ವೈದ್ಯಕೀಯ ಸಂಘದ ಸಂಯೋಜಕ ಡಾ. ದಿನೇಶ ಹೆಗಡೆ, ಕಾರವಾರ ನಗರಸಭೆಯ ಅಧ್ಯಕ್ಷ ಡಾ. ನಿತಿನ್ ಪಿಕಳೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಕಾರವಾರ ಶಾಖೆಯ ಅಧ್ಯಕ್ಷ ಡಾ.(ಕ್ಯಾಪ್ಟನ್) ಸುರೇಶ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಡಾ. ಅಮಿತ್ ಕಾಮತ್ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ, ಹೃದ್ರೋಗ, ಮೂತ್ರಪಿಂಡ ಶಾಸ್ತ್ರ, ಕೀಲು ಮೂಳೆಶಾಸ್ತ್ರ, ಗ್ಯಾಸ್ಟ್ರೋ ಎಂಟರಾಲಜಿ, ಆಂಕೊಲಾಜಿ, ಯುರಾಲಾಜಿ, ನ್ಯೂರಾಲಾಜಿ ವಿಭಾಗದ ಬಗ್ಗೆ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ವೈದ್ಯರು ಮಾತನಾಡಿದರು.