ಅಂಕೋಲಾ: ಕೆನರಾ ವೆಲ್‍ಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲಿನ ಎನ್.ಸಿ.ಸಿ. ಘಟಕದ ವತಿಯಿಂದ ಹೆಲಿಕಾಪ್ಟರ್ ಅಪಘಾತದಲ್ಲಿ ವೀರ ಮರಣವನ್ನಪ್ಪಿದ ಮೂರು ಸೇನೆಯ ಮಹಾನಾಯಕ, ಭಾರತಾಂಬೆಯ ಸುಪುತ್ರ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಮತ್ತು ಧರ್ಮಪತ್ನಿ ಮಧುಲಿಕಾ ಹಾಗೂ ಇನ್ನುಳಿದ 11 ಸೇನಾ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಗಲಿದ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ನಗರದ ಬೀದಿಯಲ್ಲಿ ಎನ್.ಸಿ.ಸಿ ಕೆಡೆಟ್‍ಗಳು ಅಮರ್ ರಹೆ, ಅಮರ್ ರಹೆ ಬಿಪಿನ್ ರಾವತ್ ಅಮರ್ ರಹೆ ಮತ್ತು ಶಾಹಿದ್ ಜವಾನ ಅಮರ್ ರಹೆ ಎಂದು ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು. ಎನ್.ಸಿ.ಸಿ.ಕಮಾಂಡರ್ ಜಿ.ಆರ್.ತಾಂಡೇಲ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆನಂದು ಗಾವಂಕರ, ನಿವೃತ್ತ ಶಿಕ್ಷಕ ಎಸ್.ವಿ.ಮುಳಗುಂದ, ಶಿಕ್ಷಕರಾದ ವಿ.ಎಮ್.ನಾಯ್ಕ, ಗಿರೀಶ ಶೆಟ್ಟಿ, ಶಿಕ್ಷಕಿ ರೇಷ್ಮಾ ಮಾನಕಾಮೆ, ಕಚೇರಿ ಸಹಾಯಕ ದಿನಕರ ನಾಯ್ಕ, ಸತೀಶ ಕಾಮತ ಹಾಗೂ ಎನ್.ಸಿ.ಸಿ.ಕೆಡೆಟ್‍ಗಳು ಭಾಗವಹಿಸಿದ್ದರು.