ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಶನಿವಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅವರು ಸಂಘದ ಎಲ್ಲ ಸದಸ್ಯರ ಪ್ರಾಮಾಣಿಕ ವ್ಯವಹಾರದಿಂದ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಂಘ 2020-21ನೇ ಸಾಲಿನಲ್ಲಿ 6ಲಕ್ಷದ 40ಸಾವಿರದ 897ರೂ ನಿವ್ವಳ ಲಾಭ ಹೊಂದಿದೆ. ಸಂಘ ಕರೊನಾ ಮಹಾಮಾರಿ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಬಡವರಿಗೆ ಉಚಿತ ದಿನಸಿ ಕಿಟ್ ವಿತರಿಸಿದೆ. ಯಾವುದೇ ಸಂಘ -ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ಪ್ರತಿಯೊಬ್ಬ ಸದಸ್ಯರು ಪತ್ತು ಮತ್ತು ಮಾರಾಟ ವ್ಯವಹಾರವನ್ನು ಮಾಡಬೇಕು. ಸಂಘ ಮುಂದಿನ ದಿನದಲ್ಲಿ ಸದಸ್ಯರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಮುಖ್ಯವಾಗಿ ಸದಸ್ಯರ ಆರೋಗ್ಯ ಸುರಕ್ಷೆ ಯೋಜನಾ ಮತ್ತು ಮರಣೋತ್ತರ ನಿಧಿ ಯೋಜನಾವನ್ನು ಜನವರಿ-2022ರಿಂದ ಜಾರಿಗೆ ತರಲು ಉದ್ದೇಶಿಸಲಾಗಿದೆ. ಟಿಎಸ್ಎಸ್ ನಿಂದ ಉತ್ತಮ ಸಹಕಾರಿ ಸಂಘ ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಂಘದ ಮೂಲಕ ಹೆಚ್ಚು ಅಡಕೆ ವಿಕ್ರಿಮಾಡಿದ ಸದಸ್ಯರನ್ನು ಪ್ರತಿವರ್ಷ ಸನ್ಮಾನಿಸಲಾಗವುದು ಎಂದು ಹೇಳಿದರು.
ಸನ್ಮಾನ: ಇದೇ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಸಂಘದ ಮೂಲಕ ಹೆಚ್ಚು ಅಡಕೆ ವಿಕ್ರಿ ಮಾಡಿದ ಅನಂತ ಹೆಗಡೆ ಹೊಸಗದ್ದೆ, ಮಹಾಬಲೇಶ್ವರ ನಾಯ್ಕ ಕಬ್ಬಿನಸರ ಹಾಗೂ ಮಂಜುನಾಥ ಹೆಗಡೆ ಮಾಣಿಕ್ನಮನೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ,ಅಕೌಂಟೆಂಟ್ ಮಹ್ಮದ್ ಗುಲ್ಜಾರ್ ಸಾಬ್ ಹಾಗೂ ಕೃಷ್ಣಕಾಂತ ಹೆಗಡೆ ವಾರ್ಷಿಕ ವರದಿ ಹಾಗೂ ಜಮಾಖರ್ಚು ಹಾಗೂ ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಅಭಿವೃದ್ಧಿ ಕುರಿತು ಹಾಗೂ ವ್ಯವಸ್ಥಿತವಾದ ಗೋದಾಮು ನಿರ್ಮಿಸುವುದಕ್ಕೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸದಸ್ಯರು ಚರ್ಚೆ ನಡೆಸಿದರು.
ಉಪಾಧ್ಯಕ್ಷೆ ಇಂದಿರಾ ಜಿ.ಹೆಗಡೆ, ನಿರ್ದೇಶಕರಾದ ಅಶೋಕ ಹೆಗಡೆ ಹಿರೇಕೈ, ಅಶೋಕ ಹೆಗಡೆ ಹೀನಗಾರ, ನಾಗರಾಜ ಹೆಗಡೆ ಹುಲಿಮನೆ, ಮಂಜುನಾಥ ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಗೌಡ ಮಾದ್ಲಮನೆ, ಸುಮಾ ಎಂ.ಹೆಗಡೆ ಹೊನ್ನೆಹದ್ದ, ನಾಗರಾಜ ಹೆಗಡೆ ಹೊಲಗದ್ದೆ, ಸುಧಾಕರ ಹರಿಜಜನ ಹೊನ್ನೆಹದ್ದ ಉಪಸ್ಥಿತರಿದ್ದರು.
ನಿರ್ದೇಶಕರಾದ ಅನಂತ ಹೆಗಡೆ ಹೊಸಗದ್ದೆ, ಅನಂತ ಹೆಗಡೆ ಗೊಂಟನಾಳ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಜಯಂತ ಹೆಗಡೆ ಹೊನ್ನೆಹದ್ದ ಹಾಗೂ ಸುಬ್ರಹ್ಮಣ್ಯ ಮೊಗೇರ್ ಹಾರ್ಸಿಕಟ್ಟ ಸಹಕರಿಸಿದರು.
ತಾಳಮದ್ದಳೆ: ನಂತರ ಹಾರ್ಸಿಕಟ್ಟಾ ಗನೇಶ ಮಂಟಪದಲ್ಲಿ ಸಂಘದ ಮಾಜಿ ನಿರ್ದೇಶಕರಾಗಿದ್ದ ಹಾಗೂ ಯಕ್ಷಗಾನ ಕಲಾವಿದರಾಗಿದ್ದ ಬಂಗಾರ್ಯ ಮೋಶ್ಯಾ ನಾಯ್ಕ ಹಳಿಯಾಳ ಅವರ ಸ್ಮರಣಾರ್ಥ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ, ಯಕ್ಷಚಂದನ ದಂಟಕಲ್ ಹಾಗೂ ಅತಿಥಿ ಕಲಾವಿದರಿಂದ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಎಂ.ಪಿ.ಹೆಗಡೆ ಉಳ್ಳಾಲಗದ್ದೆ, ಮಂಜುನಾಥ ಹೆಗಡೆ ಕಂಚಿಮನೆ, ಅರ್ಥಧಾರಿಗಳಾಗಿ ವಿ.ಚಂದ್ರಶೇಖರ ಭಟ್ಟ ಗಾಳಿಮನೆ, ಎಂ.ಡಿ.ಭಟ್ಟ ಅಗ್ಗೇರೆ, ಪಿ.ವಿ.ಹೆಗಡೆ ಹೊಸಗದ್ದೆ, ಆರ್.ವಿ.ಹೆಗಡೆ ಹೊನ್ನೆಹದ್ದ, ಎಂ.ಆರ್.ಹೆಗಡೆ ದಂಟಕಲ್ ಪಾತ್ರ ನಿರ್ವಹಿಸಿದರು.
ರಮೇಶ ಹೆಗಡೆ ಹಾರ್ಸಿಮನೆ, ದಿನೇಶ ಹೆಗಡೆ ಚಳ್ಳೆಹದ್ದ, ಅನಂತ ಹೆಗಡೆ ಹೊಸಗದ್ದೆ ಕಾರ್ಯಕ್ರಮ ನಿರ್ವಹಿಸಿದರು.