• first
  second
  third
  previous arrow
  next arrow
 • ಭಗವದ್ಗೀತೆ ನಮ್ಮ ಜೀವನದ ಭಾಗವಾಗಲಿ; ನಾರಾಯಣ ಬಳ್ಳಿ

  300x250 AD

  ಶಿರಸಿ: ನಗರದ ಎಂ.ಇ.ಎಸ್. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಶ್ರೀ ಭಗವದ್ಗೀತೆಯ ಕುರಿತಾಗಿ ಗೀತಾ ಕಂಠಪಾಠ ಮತ್ತು ಭಾಷಣ ಸ್ಪರ್ಧೆಗಳು ನಡೆಯಿತು.


  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಾರಾಯಣ ಭಟ್ಟ, ಬಳ್ಳಿ ವಹಿಸಿಕೊಂಡು ಭಗವದ್ಗೀತೆಯಲ್ಲಿ ಬದುಕಿಗೆ ಭರವಸೆಯಿದೆ. ಕಲಿಯುವವರಿಗೆ ಜ್ಞಾನ ಇದೆ. ನೋಂದವರಿಗೆ ಸಂತೈಕೆಯ ಮಾತು ಇದೆ ಆದ್ದರಿಂದ ಗೀತೆ ನಮ್ಮ ಜೀವನದ ಭಾಗವಾಗಬೇಕೆಂದು ಎಂದರು.


  ತಾಲೂಕಿನ ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ವೆಂಕಟೇಶ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಸಂಚಾಲಕ ಪ್ರೋ. ಕೆ.ವಿ.ಭಟ್ಟ ಅಭಿಯಾನದ ಕುರಿತು ಪ್ರಾಸ್ತಾವಿಕ ಮಾತನ್ನಾಡಿ, ಧಾರ್ಮಿಕತೆಯಿಂದ ವಿಮುಖಗೊಳ್ಳುತ್ತಿರುವ ಯುವಜನತೆ ಮಾನಸಿಕ ಖಿನ್ನತೆಯಿಂದ ಒತ್ತಡ ನಿಭಾಯಿಸುವದರಲ್ಲಿ ವಿಫಲರಾಗುತಿದ್ದಾರೆ. ಆದ್ದರಿಂದ ಯುವ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಸಾಮಾಜಿಕ ಸಾಮರಸ್ಯದ ಮೂಲಕ ಸಮಾಜಿಕ ಮೌಲ್ಯ ಗಟ್ಟಿಗೊಳಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಕಟ್ಟಿ ಬೆಳಸುವ ನಿಟ್ಟಿನಲ್ಲಿ ಸ್ವರ್ಣವಲ್ಲೀ ಸಂಸ್ಥಾನವು 12 ವರ್ಷಗಳಿಂದ ರಾಜ್ಯಾದ್ಯಂತ ಕಾರ್ಯಕ್ರಮಗಳ ಮೂಲಕ ಜನಜಾಗೃತಿಯನ್ನು ಮೂಡಿಸುತ್ತಾ ಬಂದಿದೆ ಎಂದರು.

  300x250 AD


  ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕೋಮಲಾ ಭಟ್ಟ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜೇಂದ್ರ ಹೆಗಡೆ ಇದ್ದರು.
  ಡಾ. ಮಂಜುನಾಥ ಹೆಗಡೆ ಸ್ವಾಗತಿಸಿದರು. ನಿತಾ ವಂದಿಸಿದರು. ಪ್ರೋ. ಶ್ರೀಧರ ಮೇಸ್ತ ನಿರೂಪಿಸಿದರು.


  ಭಾಷಣ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದ ಚಂದನ ಶಾಲೆಯ ಅನ್ಮಿತ್ ಆರ್‌ವಿ, ಸೆಂಟ್‌ಅಂಟೋನಿಯ ಮಾನ್ಯ ಹೆಗಡೆ, ಹಿರಿಯ ವಿಭಾಗದಲ್ಲಿ ಕುಮಟಾದ ಭೂಮಿಕಾ ಹೆಗಡೆ, ಕುಮಟಾದ ಚಂದನ ಜಿ.ಹೆಗಡೆ,ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಚಂದನದ ವರ್ಶಿನಿ ಹೆಗಡೆ, ಬಿಸಗೋಡಿನ ಚಿನ್ಮಯ ಧೂಳಿ, ಹಿರಿಯರ ವಿಭಾಗದಲ್ಲಿ ಚಂದನದ ಯಶಸ್ವಿನಿ ಹೆಗಡೆ, ಮಾರಿಗುಡಿಯ ಸ್ನೇಹಾ ಶರ್ಮಾ, ಪ.ಪೂ ವಿಭಾಗದಲ್ಲಿ ಶ್ರೀದೇವಿ ಹುಲೇಕಲ್ಲಿನ ಕೆ.ಎನ್.ಕೀರ್ತಿ, ಎಂಇಎಸ್ ನ ಮಹಿಮಾ ಹೆಗಡೆ ಕ್ರಮವಾಗಿ ಪ್ರಥಮ ದ್ವಿತೀಯ ಪಡೆದುಕೊಂಡರು.

  Share This
  300x250 AD
  300x250 AD
  300x250 AD
  Back to top