• Slide
    Slide
    Slide
    previous arrow
    next arrow
  • ಆರೋಗ್ಯ ಭಾರತಿ ದಾಂಡೇಲಿ ನೂತನ ಪದಾಧಿಕಾರಿಗಳ ರಚನೆ

    300x250 AD


    ದಾಂಡೆಲಿ: ದಾಂಡೇಲಿ ಹಾಗೂ ಜೋಯಿಡಾದ ತಾಲೂಕು ಒಳಗೊಂಡ ದಾಂಡೇಲಿ ತಾಲೂಕ ಆರೋಗ್ಯ ಭಾರತಿ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಡಿ.11 ರಂದು ದಾಂಡೇಲಿಯ ರೋಟರಿ ಶಾಲೆಯ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳು ಹಾಗೂ, ಸದಸ್ಯರ ಸಮಿತಿಯಲ್ಲಿ ರಚನೆಯಾಯಿತು.


    ಆರೋಗ್ಯ ಭಾರತಿ ದಾಂಡೇಲಿ ತಾಲೂಕ ಸಮಿತಿಯ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಹಾಗೂ, ಉಪಾಧ್ಯಕ್ಷರಾಗಿ ವಿದ್ಯಾರಣ್ಯ ಜಡೆ, ಕಾರ್ಯದರ್ಶಿಯಾಗಿ ಪ್ರಕಾಶ್ ಸಾಪ್ರೆ, ಸಹ ಕಾರ್ಯದರ್ಶಿಯಾಗಿ ಸುಭೇಂದ್ ಕಾಮತ್, ಹಾಗೂ ಶ್ರೀಧರ್ ಮರಾಠಿ, ಮಹಿಳಾ ಪ್ರಮುಖರಾಗಿ ಕವಿತಾ ಕೋಮಲ ಪೂಜಾರ್, ಯೋಗ ಪ್ರಮುಖರಾಗಿ ರೇವತಿ ಪರಾಂಜಪೆ, ಹಾಗೂ 8 ಜನ ಸದಸ್ಯರನ್ನು ಒಳಗೊಂಡ ದಾಂಡೇಲಿ ತಾಲೂಕ ಸಮಿತಿಯನ್ನು ಆರೋಗ್ಯ ಭಾರತೀಯ ಶಿರಸಿ ವಿಭಾಗ ಸಹ ಸಂಯೋಜಕ ನಾಗೇಶ್ ಅವರು ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು.


    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧಾಕರ್ ಶೆಟ್ಟಿ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ ಶೇಖರ್ ಅವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್ ಹಿರಿಯರಾದ ವಾಸುದೇವ ಪ್ರಭು ಉಪಸ್ಥಿತರಿದ್ದರು, ಹಾಗೂ ಕಾರ್ಯಕ್ರಮದಲ್ಲಿ ಮತ್ತೊಬ್ಬ ಹಿರಿಯರಾದ ಭಜರಂಗದಳದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯನಾರಾಯಣ್ ಅವರು ಉಪಸ್ಥಿತರಿದ್ದರು.

    300x250 AD


    ಕಾರ್ಯಕ್ರಮವು ವರದಾ ಜೋಷಿ ಯವರ ದೇಶಭಕ್ತಿಯೊಂದಿಗೆ ಪ್ರಾರಂಭವಾಗಿ ವಿದ್ಯಾರಣ್ಯ ಜಡೆಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top