• first
  second
  third
  previous arrow
  next arrow
 • ನೆಮ್ಮದಿ ಕುಠೀರದಲ್ಲಿ ಅಗಲಿದ ಸೇನಾನಿಗಳಿಗೆ ಶ್ರದ್ಧಾಂಜಲಿ

  300x250 AD


  ಶಿರಸಿ: ನಗರದ ಸಾಮ್ರಾಟ ಹೊಟೆಲ್ ಎದುರಿನ ನೆಮ್ಮದಿ ಕುಟೀರ ದಲ್ಲಿ ಇತ್ತಿಚೆಗೆ ವಿಧಿವಶರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಸಹೊದ್ಯೊಗಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.


  ಸಾಮ್ರಾಟದ ಸಂಘ ಮತ್ತು ಸಾಮ್ರಾಟ್ ಕಟ್ಟೆ ಸಂಘ ಸೇರಿ ಶ್ರದ್ಧಾಂಜಲಿ ಸಭೆಯನ್ನು ಆಚರಿಸಿ ಅಗಲಿದ ದಿವ್ಯಾತ್ಮಗಳಿಗೆ ಶಾಂತಿಗಾಗಿ ಪ್ರಾರ್ಥಿಸಲಾಯಿತು. ಶಿರಸಿ ಪಿಡಬ್ಲ್ಯೂಡಿ ದ ನಿವೃತ್ತ ಅಭಿಯಂತರ ಬಿ ಎನ್ ಭಟ್ಟ ರವರು ರಾವತ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು.


  ನಿವೃತ್ತ ಪ್ರೋಫೆಸರ್ ಕೆ ವಿ ಭಟ್ಟ, ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಎಮ್.ಎಮ್ ಭಟ್ಟ ರವರು ಬಿಪಿನ್ ರವರ ಸಾಧನೆ ಚಾಕಚಕ್ಯತೆ ಅವರ ದೃಢ ನಿಲುವು ದೇಶಾಭಿಮಾನದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

  300x250 AD


  ಇದೇ ಸಂದರ್ಭದಲ್ಲಿ ವೈಶಾಲಿ ವಿ ಪಿ ಹೆಗಡೆ, ಉದ್ಯಮಿ ಎಸ್ ಎಮ್ ಭಟ್ಟ, ನಾಗರಾಜ್ ಹೆಗಡೆ ಬೊಮ್ನಳ್ಳಿ, ಎಸ್.ಕೆ ಭಾಗವತ, ಸಾಮಾಜಿಕ ಕಾರ್ಯಕರ್ತ ರಾಘು ಭಟ್ಟ ಕಲಗಾರ್ ವಿನಾಯಕ ಮುಂಡಿಗೇಸರ, ಮಹೇಂದ್ರ ಹೆಗಡೆ, ಎನ್ ಡಿ ಭಟ್ಟ, ರಾಮಣ್ಣ ತುಡಗುಣಿ ಮತ್ತಿತರರು ಪಾಲ್ಗೊಂಡರು.

  Share This
  300x250 AD
  300x250 AD
  300x250 AD
  Back to top