• first
    second
    third
    previous arrow
    next arrow
  • ಡಿ.14ಕ್ಕೆ ಗೀತಾ ಜಯಂತಿ ಕಾರ್ಯಕ್ರಮ

    300x250 AD

    ಕುಮಟಾ: ಭಗವದ್ಗೀತಾ ಅಭಿಯಾನ ಸಮಿತಿಯಿಂದ ಗೀತಾಜಯಂತಿ ಕಾರ್ಯಕ್ರಮವನ್ನು ಡಿ.14 ರಂದು ಮಂಗಳವಾರ ಪಟ್ಟಣದ ನೆಲ್ಲೀಕೇರಿ ಶ್ರೀ ಮಹಾಸತಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಅಂದು ಮಧ್ಯಾಹ್ನ 2-30 ರಿಂದ ಭಗವದ್ಗೀತೆಯ 18 ಅಧ್ಯಾಯಗಳ ಪಠಣವನ್ನು ಭಗವದ್ಗೀತಾ ಕೇಂದ್ರದ ಮಾತೆಯರು ಹಾಗೂ ಸಾರ್ವಜನಿಕರು ನೆಡೆಸಿಕೊಡಲಿದ್ದಾರೆ. ನಂತರ ಸಂಜೆ 5 ಗಂಟೆಯಿಂದ ಸಭಾಕಾರ್ಯಕ್ರಮ ಜರುಗಲಿದ್ದು, ಶಿರಸಿ ಶ್ರೀರಾಜರಾಜೇಶ್ವರಿ ಸಂಸ್ಕøತ ಕಾಲೇಜಿನ ವೇದಾಂತ ಪ್ರಾಧ್ಯಾಪಕ ವಿ.ಡಾ. ಶಂಕರ ಭಟ್ಟ ಬಾಲಿಗದ್ದೆಯವರು ಭಗವದ್ಗೀತೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರಕನ್ನಡ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ ಮುರಳೀಧರ ಪ್ರಭು, ಕುಮಟಾ ತಾಲೂಕು ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ರಮೇಶ ಉಪಾಧ್ಯಾಯ ಮುಂತಾದವರು ಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕುಮಟಾ ತಾಲೂಕು ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top