• first
  second
  third
  previous arrow
  next arrow
 • ಡಿಸಿಸಿ ಬ್ಯಾಂಕಿಗೆ 9.44ಕೋಟಿ ರೂ ಲಾಭ

  300x250 AD

  ಶಿರಸಿ: 2020-21ನೇ ಸಾಲಿನಲ್ಲಿ ಪ್ರತಿಷ್ಠಿತ ಜಿಲ್ಲಾ ಡಿಸಿಸಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದ್ದು, ರೂ. 9.44ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ಡಿಸಿಸಿ ಅಧ್ಯಕ್ಷ, ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

  ಶನಿವಾರ ನಗರದ ಡಿಸಿಸಿ ಬ್ಯಾಂಕ್ ನ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬ್ಯಾಂಕ್ ನಿಂದ ಜಿಲ್ಲೆಯ ಕೃಷಿಕರಿಗೆ 57% ಸಾಲವನ್ನು ನೀಡಲಾಗಿದೆ. ಬ್ಯಾಂಕ್ ಗೆ 100 ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಬ್ಯಾಂಕಿನ ಶೇರು ಬಂಡವಾಳ ರೂ. 79.18ಕೋಟಿ, ನಿಧಿಗಳು ರೂ. 159.4ಕೋಟಿ ಹಾಗೂ ಠೇವು ರೂ.2536.46ಕೋಟಿಗೆ ಏರಿದ್ದು, ಒಟ್ಟೂ ಆದಾಯ ರೂ.135,26ಕೋಟಿ ಆಗಿದೆ. ಬ್ಯಾಂಕು ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ರೈತರಿಗೆ ಎಲ್ಲಾ ವಿಧದ ಕೃಷಿ ಸಾಲ ಪೂರೈಸುತ್ತಲಿದ್ದು, ಕಳೆದ 15 ವರ್ಷಗಳಿಂದ ನಬಾರ್ಡ್‍ದವರ ಮಾರ್ಗಸೂಚಿ ಮೇರೆಗೆ ಕೃಷಿಭೂಮಿ ಖರೀದಿ ಬಗ್ಗೆ ವ್ಯವಸಾಯ ಸಾಲದಡಿಯಲ್ಲಿ ಮಾಧ್ಯಮಿಕ ಸಾಲ ನೀಡಲಾಗುತ್ತಿದೆ ಎಂದರು

  ರಾಜ್ಯ ಸರಕಾರ ದಿನಾಂಕ: 01-04-2004 ರಿಂದ ಜಾರಿಯಲ್ಲಿ ತಂದ ಬಡ್ಡಿ ರಿಯಾಯ್ತಿ ಯೋಜನೆಯನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತ 2020-21ನೇ ಸಾಲಿಗೂ ಸಹ ಮುಂದುವರೆಸಿದ್ದು, ಈ ಯೋಜನೆಯನ್ವಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯ ರೈತರಿಗೆ ಸರಕಾರ ನಿರ್ಧರಿಸಿದ ರಿಯಾಯ್ತಿ ಬಡ್ಡಿದರದಲ್ಲಿ ಕೃಷಿ ಸಾಲಗಳನ್ನು ವಿತರಿಸಲಾಗಿರುತ್ತದೆ.

  ಈ ಯೋಜನೆಯನ್ವಯ ಪ್ರಸಕ್ತ ವರ್ಷಕ್ಕೆ ಸಂಬಂಧಿಸಿ ನಮ್ಮ ಬ್ಯಾಂಕು ಶೂನ್ಯ(0) ಬಡ್ಡಿದರದಲ್ಲಿ ಕೃಷಿ ಸಾಲಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೀಡಿ ತನ್ಮೂಲಕ ಅಲ್ಪಾವಧಿ ಕೃಷಿ ಸಾಲಗಳ ಬಗ್ಗೆ ರೈತರಿಗೆ ರೂ.3.00 ಲಕ್ಷದವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ, ಮಧ್ಯಮಾವಧಿ ಕೃಷಿ ಸಾಲಗಳನ್ನು ಶೇ.3 ರ ಬಡ್ಡಿದರದಲ್ಲಿ ರೂ.10.00 ಲಕ್ಷದವರೆಗೆ ಒದಗಿಸಲಾಗಿದೆ.

  ಬ್ಯಾಂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿವಿಧ ಕೃಷಿ ಉದ್ದೇಶಗಳಿಗೆ ಮಾಧ್ಯಮಿಕ ಸಾಲ ನೀಡುತ್ತಿದ್ದು, ನಮ್ಮ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಸಹ ಸಾಲ ನೀಡಲಾಗಿದೆ

  300x250 AD

  ಬ್ಯಾಂಕು ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ವಿವಿಧ ಉದ್ದೇಶಗಳಿಗೆ ಅನುಗುಣವಾಗಿ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲಗಳನ್ನು ಪೂರೈಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳ ನಿರ್ವ ಹಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವದನ್ನು ಮನಗಂಡು ವಿವಿಧ ಬೆಳೆಗಳಿಗೆ ನೀಡುವ ಬೆಳೆ ಸಾಲ (ಕೆ.ಸಿ.ಸಿ.ಸಾಲ)ದ ಎಕರೆವಾರು ಮಿತಿಯನ್ನು ಜಿಲ್ಲಾ ತಜ್ಞರ ಸಮಿತಿಯ ನಿರ್ಧಾರದಂತೆ ಹೆಚ್ಚಿಸಲಾಗಿದೆ. ಅದರಂತೆ ವಿವಿಧ ಉದ್ದೇಶಗಳ ಕೃಷಿ ಮಾಧ್ಯಮಿಕ ಸಾಲಕ್ಕೆ ಸಂಬಂಧಿಸಿ ಆಯಾ ಬೆಳೆಗಳಿಗೆ ಅನುಗುಣವಾಗಿ ಎಕರೆವಾರು ಮಿತಿ (ಸ್ಟೇಲ್ ಆಫ್ ಫೈನಾನ್ಸ್) ಯನ್ನು ಸಹ ಹೆಚ್ಚಳ ಮಾಡಲಾಗಿದೆ.

  ಬ್ಯಾಂಕು ಜಿಲ್ಲೆಯ 53 ಶಾಖೆಗಳ ಮೂಲಕ ನೇರವಾಗಿ ಗ್ರಾಹಕರಿಗೆ ವಿವಿಧ ಉದ್ದೇಶಗಳ ಬಗ್ಗೆ ಸಾಲ ನೀಡುತ್ತಿದೆ. ಜೂ.30, 2021 ಕ್ಕೆ ಸಾಲ ವಸೂಲಿ ಶೇ.98.61 ಆಗಿದೆ. ಬ್ಯಾಂಕಿನ 53 ಶಾಖೆಗಳು ಗಣಕೀಕರಣಗೊಂಡಿರುತ್ತಿದ್ದು, ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಗ್ರಾಹಕರಿಗೆ ತ್ವರಿತವಾಗಿ ಸೇವೆಯನ್ನು ಒದಗಿಸಲಾಗುತ್ತಿದೆ.

  ನಬಾರ್ಡ್ ಜಾರಿಯಲ್ಲಿ ತಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಯೋಜನೆ 1998ನೇ ಸಾಲಿನಿಂದಲೇ ಅನುಷ್ಠಾನಗೊಳಿಸಿದೆ. ಕೇಂದ್ರ ಸರಕಾರ/ನಬಾರ್ಡ್ ಅನುಷ್ಠಾನಗೊಳಿಸಿದ ಸ್ವ-ಸಹಾಯ ಗುಂಪು(SHG), ರಚನೆ ಹಾಗೂ ಬ್ಯಾಂಕು ಸಾಲ ಜೋಡಣೆ ಅಭಿವೃದ್ಧಿ ಕ್ರಿಯಾ ಯೋಜನೆ, ಬಿ.ಡಿ.ಪಿ.ಗಳನ್ನು ಅನುಷ್ಠಾನಗೊಳಿಸಿದೆ.

  ಕರ್ನಾಟಕ ರಾಜ್ಯ ಸರ್ಕಾರವು 2016 ನೇ ಸಾಲಿನಿಂದ ಈ ಹಿಂದೆ ಇದ್ದ ಬೆಳೆ ವಿಮೆ ಪದ್ಧತಿಗೆ ಪರ್ಯಾಯವಾಗಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕೆಲವು ಮಾರ್ಪಾಡುಗಳೊಂದಿಗೆ “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ (ವಿಮಾ) ಯೋಜನೆ” ಯನ್ನು ಜಾರಿಯಲ್ಲಿ ತಂದಿರುತ್ತದೆ. ಯೋಜನೆಯನ್ವಯ ಆಹಾರ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಜೋಳ ಇನ್ನಿತರ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ'' ಹಾಗೂ ಅಡಿಕೆ, ಕಾಳುಮೆಣಸು ಇನ್ನಿತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದಂತೆಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ” ಯನ್ನು ಪ್ರತ್ ಪ್ರತ್ಯೇಕ ಮಾನದಂಡದಲ್ಲಿ ಜಾರಿಗೊಳಿಸಿದ್ದು ಇರುತ್ತದೆ. ಇದಕ್ಕಾಗಿ ಸರ್ಕಾರವು “ಸಂರಕ್ಷಣೆ ಪೋರ್ಟಲ್ ನ್ನು ಅಭಿವೃದ್ಧಿಪಡಿಸಿದ್ದು, ವಿಮೆಗೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳೂ Online ಮುಖಾಂತರವೇ ಆಗುತ್ತಿದೆ ಎಂದು ತಿಳಿಸಿದರು.


  ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕ ಎಸ್.ಎಲ್ ಘೋಟ್ನೇಕರ್, ಆರ್.ಎಂ ಹೆಗಡೆ, ಜಿ.ಆರ್ ಹೆಗಡೆ, ಗಜಾನನ ಪೈ, ಪ್ರಕಾಶ ಗುನಗಿ, ಸುರೇಶ್ಚಂದ್ರ ಹೆಗಡೆ, ಬ್ಯಾಂಕ್ ಎಂಡಿ ಆರ್.ಜಿ ಭಾಗವತ ಇನ್ನಿತರರು ಇದ್ದರು.

  Share This
  300x250 AD
  300x250 AD
  300x250 AD
  Back to top