• first
  second
  third
  previous arrow
  next arrow
 • ಮಾಲಾದೇವಿ ಕ್ರೀಡಾಂಗಣದಲ್ಲಿ ಡಿ.29, 30ಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ

  300x250 AD

  ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರಕನ್ನಡ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಾರವಾರ ಇವರ ಸಹಯೋಗದೊಂದಿಗೆ 2021-22 ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಡಿ. 29 ಮತ್ತು 30 ರಂದು ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ.

  ಡಿ. 31 ರಂದು ಶಿರಸಿಯಲ್ಲಿ ಈಜು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಎಲ್ಲಾಖಾಯಂ ಸರ್ಕಾರಿಅಧಿಕಾರಿ ಮತ್ತು ಸಿಬ್ಬಂದಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿರುತ್ತದೆ. ಈ ಕ್ರೀಡಾಕೂಟದಲ್ಲಿದೈಹಿಕ ಶಿಕ್ಷಕರು, ತರಬೇತುದಾರರು, ಸಮವಸ್ತ್ರಧರಿಸುವಅರಣ್ಯ, ಪೋಲಿಸ್ ಮತ್ತುಇತರೆ ಸರ್ಕಾರಿ ನೌಕರರು ಭಾಗವಹಿಸಲು ಅವಕಾಶವಿರುವುದಿಲ್ಲ. ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಟೇಬಲ್ ಟೆನ್ನಿಸ್, ಷಟಲ್ ಬ್ಯಾಡ್‍ಮಿಂಟನ್, ಈಜು, ಭಾರಎತ್ತುವ ಸ್ಪರ್ಧೆ, ಪವರ್ ಲಿಪ್ಟಿಂಗ್, ದೇಹದಾಡ್ರ್ಯ ಹಾಗೂ ಟೆನಿಕಾಯಿಟ್‍ಥ್ರೋಬಾಲ್, ಪುಟ್‍ಬಾಲ್, ಬಿ.ಬಿ.ಟಿ ಕ್ರೀಡೆಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.

  300x250 AD

  ಪುರುಷ ನೌಕರರಲ್ಲಿ 40 ವರ್ಷದೊಳಗಿನವರಿಗಾಗಿ, 40 ರಿಂದ 50 ಮತ್ತು 50 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು. ಮಹಿಳೆಯರಲ್ಲಿ 35 ವರ್ಷದೊಳಗೆ, 35 ರಿಂದ 45 ವರ್ಷದೊಳಗಿನ ಹಾಗೂ 45 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು. ಸಾಂಸ್ಕøತಿಕ ಸ್ಪರ್ಧೆಗಳಿಗೆ, ಚೆಸ್ ಪಂದ್ಯಾವಳಿಗಳಿಗೆ ವಯೋಮಿತಿಇರುವುದಿಲ್ಲ ಹಾಗೂ ಪುರುಷ ಮತ್ತು ಮಹಿಳೆರಿಗೆ ಪ್ರತ್ಯೇಕ ಸ್ಪರ್ಧೆಗಳಿರುವುದಿಲ್ಲ. ಕೇರಂ ಪಂದ್ಯಾವಳಿಯಲ್ಲಿ ವಯೋಮಿತಿಇರುವುದಿಲ್ಲ ಆದರೆ ಪುರುಷ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು.

  ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲಾಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಕೋರಿದ್ದಾರೆ.

  Share This
  300x250 AD
  300x250 AD
  300x250 AD
  Back to top