ಸಿದ್ದಾಪುರ: ಈ ದೇಶದ ಏಕತೆ, ಅಖಂಡತೆ, ಸಮಗ್ರತೆಯನ್ನು ನಾವು ಕಾಪಾಡುತ್ತೇವೆ ಎನ್ನುವಂತಹ ಪ್ರತಿಜ್ಞೆಯನ್ನು ಕ್ಷಣಕ್ಷಣಕ್ಕೆ ಮಾಡುವ ಮೂಲಕ ಸಮೃದ್ಧವಾದ ದೇಶಕಟ್ಟಲು ನಾವೆಲ್ಲರೂ ಬದ್ಧರಾದಾಗ ಬಿಪಿನ್ ರಾವತ್ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ತಿಮ್ಮಪ್ಪ ನಾಯಕ ಸರ್ಕಲ್‍ನಲ್ಲಿ ಫ್ರೆಂಡ್ಸ್ ಸರ್ಕಲ್ ಸಿದ್ದಾಪುರದ ಸದಸ್ಯರು ಆಯೋಜನೆ ಮಾಡಿದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ಯೋಧರಿಗೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮಾಡಿ,ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುರುರಾಜ ಶಾನಭಾಗ,ಎಂ.ಕೆ.ತಿಮ್ಮಪ್ಪ, ಎ.ಜಿ.ನಾಯ್ಕಕಡಕೆರಿ ಹಾಗೂ ಶಿಕ್ಷಕ ಆನಂದ ನಾಯ್ಕ,ಕರಾಟೆ ತರಬೇತಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಹಾಜರಿದ್ದರು.