• first
  second
  third
  previous arrow
  next arrow
 • ಬೆಳೆ ಹಾನಿ ಪರಿಹಾರಕ್ಕೆ 600 ಕೋಟಿ ರೂ. ಪರಿಹಾರ; ಸಚಿವ ಆರ್.ಅಶೋಕ್

  300x250 AD

  ನವದೆಹಲಿ: ರಾಜ್ಯದಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ 600 ಕೋಟಿ ರೂಪಾಯಿಗಳ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.

  ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 21 ದಿನಗಳಲ್ಲಿ 600 ಕೋಟಿ ರೂಪಾಯಿಗಳ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ. 21 ದಿನಗಳಲ್ಲಿ 10 ಲಕ್ಷ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

  300x250 AD

  ಬಾಕಿ ಇರುವ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಕೂಡ ನೀಡಲಾಗಿದೆ ಎಂದ ಅವರು, ಸಾಮಾನ್ಯವಾಗಿ ಬೆಳೆ ನಷ್ಟಕ್ಕೆ ರೈತರಿಗೆ ತಡವಾಗಿ ಪರಿಹಾರವನ್ನು ನೀಡಲಾಗುತ್ತದೆ. ಆದರೆ ನಮ್ಮ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತಗೊಂಡು ಪರಿಹಾರವನ್ನು ವಿತರಣೆ ಮಾಡುತ್ತಿದೆ. ಜಿಲ್ಲೆಗಳಿಂದ ವರದಿ ಬರುವವರೆಗೆ ಕಾಯದೆ ಯಾವ ಜಿಲ್ಲೆಯಿಂದ ಮಾಹಿತಿ ಬರುತ್ತದೆಯೋ ತಕ್ಷಣ ಅವರಿಗೆ ಮೊದಲು ಪಾವತಿ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.

  Share This
  300x250 AD
  300x250 AD
  300x250 AD
  Back to top