ಶಿರಸಿ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ವೀರಮರಣ ಹೊಂದಿರುವ ಮೇಜರ್ ಬಿಪಿನ್ ರಾವತ್, ಅವರ ಧರ್ಮ ಪತ್ನಿ ಒಳಗೊಂಡು 13 ಹುತಾತ್ಮ ವೀರ ಯೋಧರಿಗರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಶಿರಸಿಯಲ್ಲಿ ಆಯೋಜಿಸಲಾಗಿತ್ತು.
ಶಿರಸಿ ಘಟಕದ ಹಿಂದೂ ಜಾಗರಣಾ ವೇದಿಕೆಯು ಶಿರಸಿಯ ಶಿವಾಜಿ ವೃತ್ತದಲ್ಲಿ ನಿವೃತ್ತ ಯೋಧ ವಿನಾಯಕ ಭಟ್ ದೀಪ ಬೆಳಗಿಸಿ ಭಾರತೀಯ ಸೈನ್ಯದ ಹಾಗೂ ಯೋಧರ ಬಗ್ಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ದೇವಾಡಿಗ, ತಾಲೂಕಾಧ್ಯಕ್ಷ ಪ್ರಕಾಶ ಸಾಲೇರ, ತಾಲೂಕು ಪ್ರದಾನ ಕಾರ್ಯದರ್ಶಿ ಸತೀಷ್, ಕಿರಣ, ಗಜಾನನ, ಮಹೇಶ ಹಂಚಿನಕೇರಿ, ಶ್ರೀನಿವಾಸ, ನಿವೃತ್ತ ಸೇನಾನಿಗಳಾದ ಸುಬೇದಾರ ರಾಮು, ಕೆ ಜಿ ಭಟ್, ರಾಮ ಕಿಣಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಜ್ಜಿದಾನಂದ ಭಟ್ ಹಾಗೂ ಅಪಾರ ಸಂಖ್ಯೆಯ ಶಿರಸಿಯ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ಕಿರಣಕುಮಾರ ಕುಡಾಳಕರ್ ನಿರೂಪಿಸಿದರು.