• first
    second
    third
    previous arrow
    next arrow
  • ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಶ್ರೇಷ್ಠ; ನಿಶ್ಚಲಾನಂದ ಶ್ರೀ

    300x250 AD


    ಹೊನ್ನಾವರ: ಜಗತ್ತಿನಲ್ಲಿ ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಒಂದೇ ಶ್ರೇಷ್ಠ. ಮನಸ್ಸು ಮನುಷ್ಯನ ಮನಸ್ಸಿನ ನೋವಿಗೆ ಸ್ಪಂದಿಸುವುದೇ ನಿಜವಾದ ಮನುಕುಲ ಧರ್ಮ ಎಂದು ಆದಿಚುಂಚನಗಿರಿ ಕುಮಟಾ ಶಾಖಾ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿಗಳು ನುಡಿದರು.

    ತಾಲೂಕಿನ ಒಕ್ಕಲಿಗ ಯುವ ವೇದಿಕೆ ವತಿಯಿಂದ ಮನೆ ಹಸ್ತಾಂತರ, ಕ್ಯಾಲೆಂಡರ್ ಬಿಡುಗಡೆ ಹಾಗೂ ಪದ್ಮಶ್ರೀತುಳಸಿ ಗೌಡ ಅವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅಗ್ನಿಅನಾಹುತಕ್ಕೆ ಒಳಗಾಗಿ ಸಂಪೂರ್ಣ ಹಾನಿಯಾಗಿ ಮನೆ ಕಳೆದುಕೊಂಡವರಿಗೆ ತಮ್ಮ ಶ್ರಮ ಹಾಗೂ ಆರ್ಥಿಕ ಸಹಾಯದೊಂದಿಗೆ ಮನೆ ನಿರ್ಮಿಸಿ ಕೊಟ್ಟಿರುವ ಒಕ್ಕಲಿಗ ಯುವ ವೇದಿಕೆಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು. ನಾವು ಇಂದು ಅಭಿವೃದ್ದಿಯ ಜೊತೆಗೆ ಜಂಜಾಟದ ಬದುಕನ್ನು ಸಾಗಿಸುತ್ತಿದ್ದೇವೆ. ಒತ್ತಡದ ನಡುವೆ ಪ್ರಕೃತಿಯ ಜೊತೆ ಕೊಂಚ ಸಮಯವಾದರು ಕಾಲ ಕಳೆದು ಮನಃಶಾಂತಿ ಪಡೆಯಬೇಕು ಎಂದು ನುಡಿದರು.


    ಶ್ರೀಗಳು ಹಾಗೂ ಗಣ್ಯರಿಂದ ಒಕ್ಕಲಿಗ ಯುವ ವೇದಿಕೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಶ್ರೀಗಳು ಕುಟುಂಬಸ್ಥರಿಗೆ ನೂತನ ಮನೆಯ ಭಾವಚಿತ್ರ ನೀಡುವ ಮೂಲಕ ಮನೆ ಹಸ್ತಾತರ ಕಾರ್ಯ ನಡೆಸಿದರು. ಇದೇ ಸಂದರ್ಭದಲ್ಲಿ ಪದ್ಮಶ್ರೀತುಳಸಿ ಗೌಡ ಅವರಿಗೆ ವೇದಿಕೆ ವತಿಯಿಂದ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ತುಳಸಿ ಗೌಡ ಮಾತನಾಡಿ, ಎಲ್ಲರೂ ಗಿಡಗಳನ್ನು ನೆಟ್ಟು ಪೆÇೀಷಿಸಿ ಬೆಳೆಸಿ ಎಂದು ಕರೆ ನೀಡಿದರು.

    300x250 AD


    ನಿವೃತ್ತ ಸೈನಿಕ ತಿಮ್ಮಪ್ಪಗೌಡ ಮಾತನಾಡಿ, ಒಕ್ಕಲಿಗರ ಹೆಸರು ರಾಷ್ಟ್ರಮಟ್ಟದಲ್ಲಿ ತಲುಪಲು ಪದ್ಮಶ್ರೀ ಪುರಸ್ಕøತರಾದ ತೃಪ್ತಿ ಗೌಡ ಸುಕ್ರಜ್ಜಿ ಗೌಡರಂತಹ ಮಹನೀಯರ ಸಾಧನೆಯ ಕಾರಣವಾಗಿದೆ. ಸಂಘಟನೆ ಅಥವಾ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದು ಸುಲಭದ ಮಾತಲ್ಲ ಒಕ್ಕಲಿಗ ಯುವ ವೇದಿಕೆ ತನ್ನ ಸದಸ್ಯ ಬಲ ಗಳೊಂದಿಗೆ ಉತ್ತಮ ವಿಚಾರಗಳನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದರು.
    ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಶಂಕರಗೌಡ ಗುಣವಂತೆ ಮಾತನಾಡಿ, ಮನೆ ನಿರ್ಮಿಸುವಂತಹ ಕಾರ್ಯಕ್ಕೆ ನಮ್ಮ ವೇದಿಕೆ ಸದಸ್ಯರು ಶ್ರಮವಹಿಸದ್ದಾರೆ ಹಾಗೂಇತರೆ ಸಮಾಜದವರು ಆರ್ಥಿಕ ಸಹಾಯ ನೀಡಿದ್ದಾರೆ ಎಂದು ಸ್ಮರಿಸಿದರು. ಇದು ಸಮಾಜದ ಒಳಗಿನ ಹೃದಯವಂತರ ಮಾನವೀಯ ಕಾರ್ಯವಾಗಿದೆ ದಾನಿಗಳ ಹಣ ಕಿಂಚಿತ್ತು ದುರುಪಯೋಗವಾಗದೆ ಸದ್ಬಳಕೆಯಾಗಿದೆ ಎಂದರು.

    Share This
    300x250 AD
    300x250 AD
    300x250 AD
    Back to top