ಯಲ್ಲಾಪುರ: ನಮ್ಮ ಜಿಲ್ಲೆಯಲ್ಲಿರುವ ಸುಂದರ ಪರಿಸರ ಪ್ರವಾಸಿ ತಾಣಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಿ ನೀಲ ನಕ್ಷೆ ತಯಾರಿಸಿ ಯೋಜನೆ ರೂಪಿಸಲು ಸರ್ಕಾರವನ್ನು ಒತ್ತಾಯಿಸುವ ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಯಲ್ಲಾಪುರ ಘಟಕ ನಿರ್ಣಯಿಸಿದೆ.
ಈ ಕುರಿತು ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ತಾಲ್ಲೂಕುಗಳ ಪ್ರವಾಸಿ ತಾಣಗಳ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಲು ಮಾಹಿತಿಯನ್ನು ಎಲ್ಲ ತಾಲ್ಲೂಕಿನ ಆಸಕ್ತ ಪ್ರಗತಿಪರ ಸಂಘ-ಸoಸ್ಥೆಗಳಿoದ, ಅನುಭವಿಗಳಿಂದ ಮಾಹಿತಿಯನ್ನು ಪೂರ್ವಭಾವಿಯಾಗಿ ಆಹ್ವಾನಿಸುತ್ತಿದ್ದೇವೆ. ತಾವು ತಮ್ಮ ತಾಲ್ಲೂಕುಗಳ ಪ್ರವಾಸಿ ತಾಣಗಳು, ಅವುಗಳ ಅಭಿವೃದ್ಧಿ ಹೇಗೆ ಎಂಬ ಮಾಹಿತಿಯನ್ನು ಡಿಸೆಂಬರ್ ಅಂತ್ಯದೊಳಗೆ ಸಿದ್ಧಪಡಿಸಿ, ಮಾಹಿತಿ ನೀಡಬೇಕು.
ಜನವರಿ ಮೊದಲ ವಾರದಲ್ಲಿ ಈ ಎಲ್ಲ ಆಸಕ್ತರನ್ನು ಯಲ್ಲಾಪುರದಲ್ಲಿ ನಡೆಯುವ ಸಭೆಗೆ ಆಹ್ವಾನಿಸಲಾಗುವುದು. ಆ ಸಭೆಯಲ್ಲಿ ಅಂತಿಮ ರೂಪು-ರೇಷೆ ನೀಡಿ, ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಜಿಲ್ಲೆಯ ಎಲ್ಲ ಶಾಸಕರ, ಸಚಿವರ, ಪ್ರಮುಖ ಜನಪ್ರತಿನಿಧಿಗಳೊಂದಿಗೆ ಕಾರ್ಯಾಗಾರ ನಡೆಸಿ, ಜಿಲ್ಲೆಯ ಪ್ರವಾಸೋದ್ಯಮದ ನೀಲ ನಕ್ಷೆಯನ್ನು ಸಚಿವರ ಮೂಲಕ ಸರ್ಕಾರಕ್ಕೆ ಒಪ್ಪಿಸಿ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ಈ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಮತ್ತು ಪ್ರವಾಸೋದ್ಯಮ ಸಚಿವರನ್ನು ಕೂಡ ಆಹ್ವಾನಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಆದ್ದರಿಂದ ಎಲ್ಲ ತಾಲೂಕುಗಳ ಆಸಕ್ತರು ತಮ್ಮ ತಾಲೂಕಿನ ಪ್ರವಾಸಿ ತಾಣ, ಅಭಿವೃದ್ಧಿಯ ಕುರಿತು ಯೋಜನೆ ರೂಪಿಸಿ, ಮಾಹಿತಿ ನೀಡಬೇಕೆಂದು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶಂಕರ ಭಟ್ಟ ತಾರಿಮಕ್ಕಿ 9480961217, ನಾಗರಾಜ ಮದ್ಗುಣಿ 9448223303, ಎನ್. ನಾಗೇಶಕುಮಾರ 9113096085, ವಿಶ್ವೇಶ್ವರ ಗಾಂವ್ಕರ್ 9480944994, ಸತೀಶ ನಾಯ್ಕ 9663158410, ಜಗದೀಶ ನಾಯಕ 9972179864 ಇವರನ್ನು ಸಂಪರ್ಕಿಸಬಹುದು.
ಮಾಹಿತಿಯನ್ನು ಶಂಕರ ಭಟ್ಟ ತಾರೀಮಕ್ಕಿ, ಶಿರಸಿ ರಸ್ತೆ, ಯಲ್ಲಾಪುರ (ಉ.ಕ) 581359 ಈ ವಿಳಾಸಕ್ಕೆ ಕಳುಹಿಸಲು ವಿನಂತಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶಕುಮಾರ ಉಪಸ್ಥಿತರಿದ್ದರು.