ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ, ವಿಶ್ವ ಸೇವಾ ಸಮಿತಿಯ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರವಾರ, ಶ್ರೀ ಮಹಾಲದೇವ ಶ್ರೀ ಮಹಾಸತಿ ದೇವಿ ದೇವಸ್ಥಾನ ಕಮೀಟಿ ಅರ್ಗಾ, ಇನ್ನರ್‌ವ್ಹೀಲ್ ಕ್ಲಬ್ ಕಾರವಾರ ಹಾಗೂ ರೋಟರ‍್ಯಾಕ್ಟ್ ಕ್ಲಬ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಸುಮಾರು 62 ಜನ ಕಣ್ಣಿನ ತೊಂದರೆ ಇರುವವರನ್ನು ತಪಾಸಣೆ ಮಾಡಿ, ಅವರಲ್ಲಿ 36 ಜನರಲ್ಲಿ ಮೋತಿಬಿಂದು (ಕಣ್ಣಿನ ಪೊರೆ) ಇರುವುದನ್ನು ದೃಢಪಡಿಸಿ, ಜಿಲ್ಲಾ ಆಸ್ಪತ್ರೆಯಲ್ಲಿ ಅವರ ಗಂಟಲು ದ್ರವ ಪರೀಕ್ಷಿಸಿ ಎಲ್ಲರೂ ಕೋವಿಡ್-೧೯ ನೆಗೆಟಿವ್ ಇರುವುದನ್ನು ದೃಢಪಡಿಸಿಕೊಂಡು ಅವರನ್ನು ಡಿ.2ರಂದು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಶಿರಸಿ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಶಿರಸಿ ಆಸ್ಪತ್ರೆಯ ವೈದ್ಯರಾದ ಡಾ|| ಎ.ಜಿ.ವಸ್ತ್ರದ್, ಡಾ|| ಗಿರೀಶ ಮೇಟಿ, ಡಾ. ಆದಿತ್ಯ ಫಡ್ನಿಸ್ ಹಾಗೂ ಸಿಬ್ಬಂದಿಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರೋಟರಿ ಆಸ್ಪತ್ರೆಯ ಕಾರ್ಯದರ್ಶಿ ನಿತಿನ ಕಾಸರಕೋಡ, ಪಿಆರ್‌ಓ ಗಿರಿಶ ಧಾರೇಶ್ವರ, ಕಾರವಾರ ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ನರೇಂದ್ರ ದೇಸಾಯಿ, ಕಾರ್ಯದರ್ಶಿ ರೋ. ಮೋಹನ ನಾಯ್ಕ, ಕ್ಯಾಂಪ್ ಕೋಆರ್ಡಿನೇಟರ್ ರೋ. ಯೊಗೇಶ ಭಂಡಾರಕರ, ರೋ. ಪಾಂಡುರಂಗ ಎಸ್. ನಾಯ್ಕ ಮಹಾಲ್ಗಾರ, ಮಹಾದೇವ ಮಹಾಸತಿ ದೇವಸ್ಥಾನ ಕಮೀಟಿ ಅರ್ಗಾ ಇದರ ಸದಸ್ಯ ಪ್ರಕಾಶ ಕೋಮಾರ ನಾಯ್ಕ ಮಹಾಲ್ಗಾರ, ಸಿತಾರಾಮ ಉಗಾ ನಾಯ್ಕ ಮಹಾಲ್ಗಾರ, ವಿಶ್ವಜೀತ ವಾಮನ ನಾಯ್ಕ ಮಾಹಾಲ್ಗಾರ ಹಾಗೂ ರೋಟರಿ ಸಂಸ್ಥೆಯ ಸದಸ್ಯರು, ಇನ್ನರ್‌ವ್ಹೀಲ್ ಸಂಸ್ಥೆಯ ಸದಸ್ಯರು, ರೋಟರ‍್ಯಾಕ್ಟ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದು ಶಿಬಿರಕ್ಕೆ ಸಹಕರಿಸಿದರು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರನ್ನು ವ್ಯವಸ್ಥಿತವಾಗಿ ಕಾರವಾರಕ್ಕೆ ತಂದು ಮುಟ್ಟಿಸಲಾಯಿತು.