ಶಿರಸಿ: ದಾಸನಕೊಪ್ಪ ಭಾಗದ ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಬರಲು ಕೆ.ಎಸ್.ಆರ್.ಟಿ.ಸಿ ಬಸ್ಸನ್ನೇ ಅವಲಂಬಿಸಿದ್ದು . ಬೆಳಿಗ್ಗೆ 7ರಿಂದ 9 ಗಂಟೆವರೆಗೆ ಹಾವೇರಿ ಹಾನಗಲ್ ಕಡೆಯಿಂದ ಬರುವ ಬಸ್ ಅಲ್ಲಿಂದಲೆ ರಶ್ ಆಗಿ ಬರುತ್ತವೆ ಹೀಗಾಗಿ ಯಾವುದೇ ಬಸ್ ನ್ನು ದಾಸನಕೊಪ್ಪದಲ್ಲಿ ನಿಲ್ಲಿಸದ ಕಾರಣ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿ. ಎಂದು ಪಾಲಕ ಪರ ಯುವರಾಜ. ಜೆ. ಗೌಡ ಮನವಿ ಮಾಡಿದ್ದಾರೆ.
ಈ ಬಗ್ಗೆ ಬದನಗೊಡ ಗ್ರಾ. ಪಂ. ಗ್ರಾಮ ಸಭೆ ಮತ್ತು ತಾಲೂಕಿನ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೆ ಕೊವಿಡ ಹೆಚ್ಚಾಗುತ್ತಾ ಇದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಆಗುವ ಸಾಧ್ಯತೆ ಇದೆ. ಸಂಬoಧಿಸಿದ ಹಿರಿಯ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ ಮಕ್ಕಳ ಪಾಲಕರು ಪ್ರತಿಭಟನೆ ಇಳಿಯಬೇಕಾಗುತ್ತದೆ ಎಂದು ಪಾಲಕರು ಆಗ್ರಹಿಸಿದ್ದಾರೆ.