ಕಾರವಾರ: ಚಿಪ್ಪಿ ಗಣಿಗಾರಿಕೆ ವಿರುದ್ಧ ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಧರಣಿಯು 9ನೇ ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಸಶಸ್ತ್ರ ಪಡೆಗಳ ಮಾಜಿ ರಕ್ಷಣಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತ ವೀರ ಮರಣ ಹೊಂದಿದ ಹಾಗೂ ಭಾರತೀಯ ಸೇನೆಯ ಉತ್ತುಂಗ ಸ್ಥಾನದಲ್ಲಿರುವ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಮೌನಾಚರಣೆ ಸಲ್ಲಿಸುತ್ತ ನಮನ ಸಲ್ಲಿಸಿದ್ದಾರೆ.
ರಾಜ್ಯ ಸಂಸ್ಥಾಪಕ ರಾಜಾಧ್ಯಕ್ಷ ಎಚ್.ಎಂ.ಕೃಷ್ಣಾ, ರಾಜ್ಯ ಉಪಾಧ್ಯಕ್ಷ ರಾಜೇಶ ನಾಯ್ಕ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ ನಾಯ್ಕ, ಕಾಶಿನಾಥ ಕೌಂಡರ, ಜಟ್ಟಪ್ಪ, ಸಂಘಟನೆಯ ಆಟೋರಿಕ್ಷಾ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರಾದ ರಾಜು ಅಂಚೇಕರ್ ಉಪಸ್ಥಿತರಿದ್ದರು.