ಅಂಕೋಲಾ: ಶುಕ್ರವಾರ ನಡೆದ ವಿಧಾನ ಪರಿಷತ್‍ಚುನಾವಣೆಯಲ್ಲಿತಾಲೂಕಿನಲ್ಲಿ ಶೇ.100 ರಷ್ಟು ಮತದಾನವಾಗಿದೆ.
ತಾಲೂಕಿನ 21 ಗ್ರಾ.ಪಂ ಹಾಗೂ ಒಂದು ಪುರಸಭೆಯ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದ್ದು,ಎಲ್ಲ 249 ಚುನಾಯಿತ ಪ್ರತಿನಿಧಿಗಳೂ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲಿ ಮೊಗಟಾ ಗ್ರಾ.ಪಂನಲ್ಲಿ 1ವಿಶೇಷಚೇತನ ಮತದಾನ ಮಾಡಿದರೆ ಬೇಲೆಕೇರಿ ಮತ್ತು ಬಾವಿಕೇರಿಯಲ್ಲಿತಲಾ 1ರಂತೆಅನಕ್ಷರಸ್ಥರು ಮತದಾನ ನಡೆಸಿದ್ದಾರೆ.
ಮತದಾನ ಸುಸೂತ್ರವಾಗಿ ನಡೆಯಲು ತಾಲೂಕಾಡಳಿತ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು.