• first
    second
    third
    previous arrow
    next arrow
  • ಹೊನ್ನಾವರದಲ್ಲಿ ಶೇ. 99.70 ರಷ್ಟು ಮತದಾನ

    300x250 AD

    ಹೊನ್ನಾವರ: ವಿಧಾನಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಶಾಂತಿಯುವಾಗಿ ಶುಕ್ರವಾರ ಮತದಾನ ನಡೆಯಿತು.

    ತಾಲೂಕಿನಲ್ಲಿ 341 ಮತದಾರರಿದ್ದು, 178 ಮಹಿಳೆ, 163 ಪುರುಷ ಮತದಾರರಿದ್ದಾರೆ. ಒಂದು ಪಟ್ಟಣ ಪಂಚಾಯತಿ ಸೇರಿ 24 ಗ್ರಾಮ ಪಂಚಾಯತಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ತಾಲೂಕಿನ ಗ್ರಾ.ಪಂ. ಹಾಗೂ ಪಟ್ಟಣ ಪಂಚಾಯತಿಗೆ ಆಯ್ಕೆಯಾದ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    300x250 AD

    341 ಮತದಾರರಲ್ಲಿ 340 ಮತದಾರರು ಹಕ್ಕು ಚಲಾಯಿಸುವ ಮೂಲಕ ತಾಲೂಕಿನಲ್ಲಿ ಶೇ. 99.70 ಮತದಾನ ನಡೆಯಿತು. ಮತದಾನಕ್ಕೂ ಪೂರ್ವದಲ್ಲಿ ಕೋವಿಡ್ ಸುರಕ್ಷತಾ ಕ್ರಮ ಕೈಗೊಂಡು ಆರೊಗ್ಯ ಇಲಾಖೆಯ ಸಿಬ್ಬಂದಿಗಳು ಕೋವಿಡ್ ತಪಾಸಣೆ ನಡೆಸಿ, ಮತದಾನ ಕೇಂದ್ರಕ್ಕೆ ಕಳುಹಿಸಿದರು. 84 ಸಿಬ್ಬಂದಿಗಳು ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Back to top