• first
  second
  third
  previous arrow
  next arrow
 • ಹುತಾತ್ಮ ಯೋಧರಿಗೆ ದೀಪ ನಮನ

  300x250 AD


  ಹೊನ್ನಾವರ: ಬುಧವಾರದಂದು ತಮಿಳುನಾಡಿನ ಊಟಿಯ ಸಮೀಪದಲ್ಲಿ ಭಾರತೀಯ ಸೇನೆಯ ಹೆಲಿಕ್ಯಾಪ್ಟರ್ ಪತನಗೊಂಡು ಹುತಾತ್ಮರಾದ ಭಾರತೀಯ ಸೇನೆಯ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ 13 ಸೇನಾ ಸಿಬ್ಬಂದಿಗಳಿಗೆ ಹಿಂದೂ ಧರ್ಮ ರಕ್ಷಣಾ ಸಮಿತಿ ಹಾಗೂ ಯುವಾ ಬ್ರಿಗೇಡ್ ವತಿಯಿಂದ ದೀಪ ನಮನ ಕಾರ್ಯಕ್ರಮ ನಡೆಯಿತು.

  ಪಟ್ಟಣದ ಶರಾವತಿ ಸರ್ಕಲ್ ನಿಂದ ಬಜಾರ್ ಮಾರ್ಗವಾಗಿ ಮಾಸ್ತಿಕಟ್ಟೆಗೆ ಸಾಗಿ ಅಲ್ಲಿಂದ ದುರ್ಗಾದೇವಿ ದೇವಸ್ಥಾನದವರೆಗೆ ದೀಪ ಹಿಡಿದು ಮೆರವಣಿಗೆ ನಡೆಸಿದರು. ದಾರಿಯ ಮದ್ಯೆ ಮದ್ಯೆ ದೇಶಾಭಿಮಾನಿಗಳು ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು.

  ರಾಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಾಮರಸ್ಯ ಪ್ರಮುಖರಾದ ವಿಶ್ವನಾಥ ನಾಯಕ ಮಾತನಾಡಿ, ಇಂದು ನಾವು ಯಾವುದೇ ಭಯವಿಲ್ಲದೇ ನೆಮ್ಮದಿಯ ಜೀವನ ನಡೆಸಲು ಭಾರತ ಮಾತೆಯ ಪುತ್ರರಾದ ವೀರ ಯೋಧರೇ ಕಾರಣ. ಮೊನ್ನೆ ದಿನ ನಡೆದ ದುರ್ಘಟನೆಯಲ್ಲಿ ಸೇನಾ ಮುಖ್ಯಸ್ಥರನ್ನು ಕಳೆದುಕೊಂಡಿದ್ದೇವೆ. ಇದು ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಹುತಾತ್ಮರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

  300x250 AD

  ಹುತಾತ್ಮ ಯೋಧರ ದೀಪ ನಮನ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ದೇಶಭಕ್ತರು ಪಾಲ್ಗೊಂಡು ತಾಯಿ ಭಾರತಾಂಬೆಯ ವೀರ ಪುತ್ರರಿಗೆ ಶೃದ್ದಾಂಜಲಿ ಸಲ್ಲಿಸಿದರು.

  Share This
  300x250 AD
  300x250 AD
  300x250 AD
  Back to top