ಭಟ್ಕಳ: ಮೀನುಗಾರ ಸಮುದಾಯದವರ ಸ್ವಭಾವದಲ್ಲೇ ನಿಸ್ವಾರ್ಥ ಸೇವೆಯ ಭಾವ ದಟ್ಟವಾಗಿದೆ ಎಂದು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳು ನುಡಿದರು.
ಅವರು ಬುಧವಾರದಂದು ಸಂಜೆ ಅಳ್ವೆಕೋಡಿಯ ಶ್ರೀ ದುರ್ಗಾಪರಮೇರ್ಶವರಿ ದೇವಸ್ಥಾನದ ಧರ್ಮಾರ್ಥ ಕಲ್ಯಾಣ ಮಂಟಪದ ಉದ್ಘಾಟನೆ ನೆರವೇರಿಸಿ ನಂತರ ನಡೆಸ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇವಸ್ಥಾನದ ಕಲ್ಯಾಣ ಮಂಟಪದ ಅಭಿವೃದ್ದಿಗೆ ನಿಸ್ವಾರ್ಥ ಜನರ ದಾನ ಮುಖ್ಯವಾಗಿದೆ. ಇದು ಧಾನಿಗಳಿಗೆ ಶ್ರೇಯಸ್ಸನ್ನು ತಂದುಕೊಡುತ್ತದೆ. ಇಲ್ಲಿನ ಭಕ್ತಾಧಿಗಳು ಶ್ರೀ ದುರ್ಗಾಪರಮೇಶ್ವರಿಯ ಸೇವೆಯನ್ನು ನಿಸ್ವಾರ್ಥದಿಂದ ಸೇವೆ ಮಾಡಿದ್ದರಿಂದ ಇಷ್ಟು ದೊಡ್ಡದಾದ ಕಲ್ಯಾಣ ಮಂದಿರ ನಿರ್ಮಾಣಗೊಂಡಿದೆ. ಹಿರಿಯ ಸ್ವಾಮೀಜಿಗಳ ಆಶಯದಂತೆ ಕಲ್ಯಾಣಮಂಟಪ ಲೋಕಾರ್ಪಣೆಗೊಂಡಿದ್ದು ಬಡ ಜನರಿಗೆ ಇದರ ಉಪಯೋಗ ಸಿಗುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿದ್ದ ಮಾರಿಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ ಹಲವು ಭಕ್ತ ದಾನಿಗಳ ದಯೆಯಿಂದ ಇಂತಹ ಭವ್ಯವಾದ ಧರ್ಮಾರ್ಥ ಕಲ್ಯಾಣ ಮಂಟಪ ಲೋಕಾರ್ಪಣೆಗೊಂಡಿದೆ ಇದರ ಸದುಪಯೋಗ ಪಡೆಯುವಂತಾಗಲಿ ಎಂದರು.
ದೇವಸ್ಥಾನದ ಕಾರ್ಯದರ್ಶಿ ದೈಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಪೈ ವರದಿ ವಾಚಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹನುಮಂತ ನಾಯ್ಕ, ಚಾರಿಟೇಬಲ್ ಟ್ರಸ್ ನ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರೇವತಿ ನಾಯ್ಕ, ಭಾಸ್ಕರ ದೈಮನೆ ಉಪಸ್ಥಿತರಿದ್ದರು.