ಹೊನ್ನಾವರ: ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲದಲ್ಲಿ ಬೆಳಿಗ್ಗೆಯಿಂದ ಚಂಪಾ ಷಷ್ಠಿ ಅಂಗವಾಗಿ ದೇವಾಲದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಭಕ್ತರಿಂದ ಹಣ್ಣು-ಕಾಯಿ ಸೇವೆ, ಅರ್ಚನೆ, ಆರತಿ, ಅಭಿಷೇಕ, ಸರ್ವ ಸೇವೆ, ಅಪೂಪ ಸೇವೆ, ಪಂಚಖಾದ್ಯ ಸೇವೆ, ಲಾಡು ಪ್ರಸಾದ ಸೇವೆ ಸೇರಿದಮತೆ ವಿವಿಧ ಸೇವೆಯನ್ನು ಸಲ್ಲಿಸಿದರು. ಪ್ರಭಾತ ಕಾಲದಿಂದ ರಾತ್ರಿ 8 ಗಂಟೆಯವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು, ಸಮೀಪದ ನಾಗಬನದಲ್ಲಿರುವ ನಾಗ ದೇವರಿಗೆ ಕ್ಷೀರಾಭಿಷೇಕ, ಆರತಿ ಮತ್ತು ಫಲಾಭಿಷೇಕ ಸೇರಿದಂತೆ ವಿವಿಧ ಸೇವೆ ಸಲ್ಲಿಸಲಾಯಿತು.
ಮುತೈದೆಯರು ದೇವಾಲಯದ ಆವಾರದಲ್ಲಿನ ನಾಗಮೂರ್ತಿಗೆ ಅರಿಶಿಣ ಕುಂಕುಮ ಸಮರ್ಪಿಸಿದರು. ಸುಬ್ರಹ್ಮಣ್ಯ ಪಲ್ಲಕ್ಕಿ ಉತ್ಸವವು ನಡೆಯಿತು. ಕೊವಿಡ್ ಮಾರ್ಗಸೂಚಿಯಂತೆ ಭಕ್ತರಿಗೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸೆನಿಟೈಜೇಷನ್ ಕಡ್ಡಾಯಗೊಳಿಸಲಾಗಿತ್ತು. ಕೊವಿಡ್ ನಿಯಮ ಪಾಲನೆಯಲ್ಲಿ ಬಹುತೇಕ ಭಕ್ತರು ಸಹಕರಿಸಿದರು.ಆಡಳಿತ ಮಂಡಳಿಯಿಂದ ಕೊವಿಡ್ ನಿಯಮ ಪಾಲನೆಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೊವಿಡ್ ನಿಯಮ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುವುದಕ್ಕೆ ವ್ಯವಸ್ಥೆ, ಭಕ್ತರಿಗೆ ಭೋಜನ,ಪಾನಕ ವ್ಯವಸ್ಥೆಯನ್ನು ಕಲ್ಪಿಸಿದ್ದರು.