ಶಿರಸಿ: ವಾಹನ ಎಂಜಿನ್‍ನ ಕಾರ್ಯಕ್ಷಮತೆ ಹೆಚ್ಚಿಸಲು ದಿ.ಅಗ್ರಿಕಲ್ಚರ್ ಸರ್ವಿಸ್ ಮತ್ತು ಡೆವಲಪ್‍ಮೆಂಟ್ ಕೋ ಆಫ್ ಸೊಸೈಟಿಯ ಪೆಟ್ರೋಲ್ ಬಂಕ್‍ನಲ್ಲಿ ಶಿರಸಿಯಲ್ಲೇ ಪ್ರಥಮ ಬಾರಿಗೆ ಎಕ್ಸ್ಪಿ- 95 ಪೆಟ್ರೋಲ್ ಸೌಲಭ್ಯ ಕಲ್ಪಿಸಲಾಗಿದೆ.
ಈ ಸೌಲಭ್ಯವನ್ನು ಟಿಎಸ್‍ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಮತ್ತು ಡೆವಲಪ್‍ಮೆಂಟ್ ಸೊಸೈಟಿಯ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾಸ್ಕರ ಹೆಗಡೆ ಕಾಗೇರಿ, ಎಕ್ಸ್ಪಿ- 95 ಪೆಟ್ರೋಲ್ 95 ಒಕ್ಟೇನ್ ಉತ್ಕೃಷ್ಟ ಗುಣಮಟ್ಟ ಹೊಂದಿದ್ದು ಇದರಿಂದ ಹೆಚ್ಚಿನ ಮೈಲೇಜ್ ದೊರೆಯುತ್ತದೆ. ಇದು ಎಂಜಿನ್ ನಾಕಿಂಗ್‍ನ್ನು ವಿರೋಧಿಸುವ ಸಾಮರ್ಥ್ಯ ಮತ್ತು ಇಗ್ನೇಟಿಂಗ್ ಸಹ ಹೆಚ್ಚಿಸುತ್ತದೆ. ಬಿಎಸ್-6 ಮಾಲಿನ್ಯ ಹೊರಸೂಸುವ ಮಾನದಂಡದ ಪ್ರಕಾರ ಪರಿಸರ ಸ್ನೇಹಿ ಇಂಧನವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಐ.ಎಂ.ಹೆಗಡೆ ಮೆಣಸಿಕೇರಿ, ನಿರ್ದೇಶಕರಾದ ವಿ.ಎಂ.ಹೆಗಡೆ ಬಿಸ್ಲಕೊಪ್ಪ, ದಿನೇಶ ಹೆಗಡೆ ದುಗ್ಗುಮನೆ, ಶಿವಾನಂದ ಭಟ್ಟ ಸಣ್ಣಕೇರಿ, ಪಿ.ಸಿ.ನಾಯ್ಕ ಕಂಡ್ರಾಜಿ, ಮುಖ್ಯ ಕಾರ್ಯನಿರ್ವಾಹಕ ಗೋಪಾಲ ಹೆಗಡೆ, ವಿಭಾಗದ ಮುಖ್ಯಸ್ಥ ಶ್ರೀಧರ ಹೆಗಡೆ ಉಪಸ್ಥಿತರಿದ್ದರು.