Slide
Slide
Slide
previous arrow
next arrow

2021-22ರ ಖಾರಿಫ್ ರುತುವಿನಲ್ಲಿ 326 ಲಕ್ಷ ಟನ್‍ಗಳಷ್ಟು ಭತ್ತ ಖರೀದಿಸಿದ ಕೇಂದ್ರ

300x250 AD

ನವದೆಹಲಿ: 2021-22ರ ಖಾರಿಫ್ ಮಾರ್ಕೆಟಿಂಗ್ ಸೀಸನ್‍ನಲ್ಲಿ 326 ಲಕ್ಷ ಟನ್‍ಗಳಷ್ಟು ಭತ್ತವನ್ನು ಖರೀದಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಕನಿಷ್ಠ ಬೆಂಬಲ ಬೆಲೆ 63 ಸಾವಿರ ಕೋಟಿ ರೂಪಾಯಿಗಳ ಖರೀದಿಯಿಂದ ಸುಮಾರು 26 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಹಿಂದಿನ ವರ್ಷಗಳಂತೆ ಈ ವರ್ಷ ಕೂಡ ರೈತರಿಂದ ಎಂಎಸ್‍ಪಿ ದರದಲ್ಲಿ ಭತ್ತ ಖರೀದಿ ಸರಾಗವಾಗಿ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ.

300x250 AD

ಚಂಡೀಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಛತ್ತೀಸ್‍ಗಢ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಕೇರಳ, ತಮಿಳುನಾಡು, ಬಿಹಾರ, ಒಡಿಶಾ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಭತ್ತವನ್ನು ಖರೀದಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13

Share This
300x250 AD
300x250 AD
300x250 AD
Back to top