• first
  second
  third
  previous arrow
  next arrow
 • ಬಿದ್ರಕಾನ ಶಾಲೆ ಮಕ್ಕಳಿಗೆ ಚಿತ್ರಕಲೆ ತರಬೇತಿ ನೀಡಿದ ಚಿತ್ರಕಾರ ಜಿ.ಎಂ ಬೊಮ್ನಳ್ಳಿ

  300x250 AD


  ಸಿದ್ದಾಪುರ: ತಾಲೂಕಿನ ಎಂ. ಜಿ. ಸಿ. ಎಂ. ಪ್ರೌಢಶಾಲೆ, ಬಿದ್ರಕಾನಿನಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರರಾದ ಜಿ. ಎಂ. ಹೆಗಡೆ ಬೊಮ್ನಳ್ಳಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಚಿತ್ರಕಲೆ ಎನ್ನುವುದು ಕಬ್ಬಿಣದ ಕಡಲೆಯಲ್ಲ. ಯಾರು ಬೇಕಾದರೂ ಸತತ ಪರಿಶ್ರಮದಿಂದ ಉತ್ತಮವಾಗಿ ಚಿತ್ರ ಬಿಡಿಸಬಹುದು. ಅಲ್ಲದೇ ಪ್ರತಿಯೊಬ್ಬರು ಚಿತ್ರ ಬಿಡಿಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಜಿ. ಎಂ. ಬೊಮ್ನಳ್ಳಿ ಇವರು ಹೇಳಿದರು.

  ‘ಸೊನ್ನೆಯಿಂದ ಚಿತ್ರ’ ಎಂಬ ವಿಶೇಷ ಕಲ್ಪನೆಯ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಚಿತ್ರಗಳನ್ನು ಹೇಗೆ ಬಿಡಿಸಬಹುದೆಂಬ ಮಾಹಿತಿಯನ್ನು ಪ್ರಾಯೋಗಿಕವಾಗಿ ವಿವರಿಸಿದರು. ಸೊನ್ನೆಯಿಂದ ಆರಂಭಿಸಿ ಗಣಪತಿ, ಶಿವ, ಕೃಷ್ಣ ಮೊದಲಾದ ದೇವರುಗಳ ಚಿತ್ರ, ಜಿಂಕೆ, ನಾಯಿ ಹಾಗೂ ಇನ್ನಿತರ ಪ್ರಾಣಿಗಳ ಚಿತ್ರವನ್ನು ಬಿಡಿಸುವುದನ್ನು ಸರಳವಾಗಿ ತಿಳಿಸಿಕೊಟ್ಟರು. ಮನುಷ್ಯರ ಮುಖದ ಭಾವವನ್ನು ಚಿತ್ರದಲ್ಲಿ ಮೂಡಿಸುವುದು ಹೇಗೆ ಎಂಬುದನ್ನು ಅತ್ಯಂತ ಆಸಕ್ತಿಯುತವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು. ವಿವಿಧ ಪಕ್ಷಿಗಳ ಚಿತ್ರ, ಫ್ರೀ ಹ್ಯಾಂಡ್ ಚಿತ್ರಗಳು ಮತ್ತು ಸುಲಭವಾಗಿ ಭಾರತದ ನಖಾಶೆಯನ್ನು ಹೇಗೆ ಬಿಡಿಸಬಹುದೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಕಾಂiÀರ್iಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top