• first
  second
  third
  previous arrow
  next arrow
 • ಟಿಎಸ್‍ಎಸ್ ಸುಪರ್ ಮಾರ್ಕೆಟ್ ಲಕ್ಕಿ ಡ್ರಾ ಬಹುಮಾನಗಳ ಅನಾವರಣ

  300x250 AD

  ಶಿರಸಿ: ಟಿಎಸ್‌ಎಸ್ ಸಂಘದ ಸುಪರ್ ಮಾರ್ಕೆಟ್‌ನಲ್ಲಿ ಗ್ರಾಹಕರು ಮಾಡುವ ಖರೀದಿಗಳ ಮೇಲಿನ ಲಕ್ಕಿ ಡ್ರಾ ಬಹುಮಾನಗಳ ಅನಾವರಣ ಕಾರ್ಯಕ್ರಮವನ್ನು ಡಿ.9 ಗುರುವಾರ ಬೆಳಿಗ್ಗೆ ಸಂಘದ ಆವಾರದಲ್ಲಿ ನೆರವೇರಿಸಲಾಯಿತು.


  ಡಿ.9 ರಿಂದ ಮಾ.31 ವರೆಗೆ ಸಂಘದ ಸುಪರ್ ಮಾರ್ಕೆಟ್‌ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರತಿ 10 ಗ್ರಾಂ ಚಿನ್ನಕ್ಕೆ, ಧಾರಾ ಪಶು ಆಹಾರ ಖರೀದಿಸುವ ಗ್ರಾಹಕರುಗಳಿಗೆ ಪ್ರತಿ ಎರಡು ಚೀಲಗಳಿಗೆ, 2,499/-ಕ್ಕೂ ಮೇಲ್ಪಟ್ಟ ಬಟ್ಟೆ ಖರೀದಿಗೆ ಹಾಗೂ ಟಿ.ವಿ. ಫ್ರಿಜ್, ವಾಶಿಂಗ್ ಮಶಿನ್ ಖರೀದಿಗೆ ತಲಾ ಒಂದರಂತೆ ಕೂಪನ್‌ಗಳನ್ನು ಶಿರಸಿ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ ಹಾಗೂ ಪ್ರಾಂಚೈಸಿ ಸುಪರ್ ಮಾರ್ಕೆಟ್‌ಗಳಲ್ಲಿಯೂ ನೀಡಲಾಗುತ್ತದೆ. ಸದರಿ ಕೂಪನ್‌ಗಳನ್ನು ಸೇರಿಸಿ ಎಪ್ರಿಲ್ -2022ರಲ್ಲಿ ಟಿ.ಎಸ್.ಎಸ್. ಆವಾರದಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ.

  ಬಂಪರ್ ಬಹುಮಾನವಾಗಿ ಮಾರುತಿ ಸುಜುಕಿ ಬಲೆನೋ ಕಾರ್, ದ್ವಿತೀಯ ಬಹುಮಾನವಾಗಿ 2 ಯಾಕುಝಾ ಇಲೆಕ್ಟ್ರಿಕ್ ಸ್ಕೂಟರ್‌ಗಳು ಇತರ ಆಕರ್ಷಕ ಬಹುಮಾನವಾಗಿ 15 ಗೋದ್ರೆಜ್ ರೆಫ್ರಿಜರೇಟರ್, 15 ವಿ-ಗಾರ್ಡ ಗ್ಲಾಸ್ ಟಾಪ್ ಸ್ಟವ್, 10 ಸ್ಟೇನ್‌ಲೆಸ್ ಸ್ಟೀಲ್ ರೈಸ್ ಬಾಯ್ಲರ್, 10 ಗಾಲಾಮಾಪ್ ಹಾಗೂ 50 ಸ್ಟೀಲ್ ಹಾಟ್ ಬಾಕ್ಸ್‌ಗಳು ಇದೆ.

  300x250 AD


  ಈ ಎಲ್ಲಾ ಬಹುಮಾನಗಳ ಮೌಲ್ಯ ಅಂದಾಜು ರೂ.14 ಲಕ್ಷಕ್ಕೂ ಮೇಲ್ಪಟ್ಟಿದ್ದಾಗಿರುತ್ತದೆ. ಗ್ರಾಹಕ ಸದಸ್ಯರುಗಳು ಈ ಅವಧಿಯಲ್ಲಿ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ ಬಹುಮಾನದ ಅದೃಷ್ಟಶಾಲಿಗಳಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


  ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಎಸ್. ವಿ. ಭಟ್ಟ, ಸಾಲ್ಕಣಿ, ನಾರಾಯಣ ಈರಾ ನಾಯ್ಕ ಮೆಣಸಿ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹಾಗೂ ಸಿಬ್ಬಂದಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top