ನವದೆಹಲಿ: 2030ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ನೀಡಿದ ಅವರು, ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ಗಗನಯಾನ ಮಿಷನ್ ಅನ್ನು 2023 ರಲ್ಲಿ ನಿರೀಕ್ಷಿಸಲಾಗಿದೆ. ಮಿಷನ್‍ನ ಪೂರ್ವಗಾಮಿಯಾಗಿ ಮುಂದಿನ ವರ್ಷ ಮಾನವರಹಿತ ಹಾರಾಟವನ್ನು ನಡೆಸಲಾಗುವುದು ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ ಮತ್ತೊಂದು ರೊಬೊಟಿಕ್ ಮಿಷನ್ ನಡೆಯಲಿದೆ ಎಂದಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಗಗನಯಾನದ ಕಾರ್ಯಗಳು ವಿಳಂಬವಾಗಿವೆ ಎಂದು ಅವರು ಹೇಳಿದ್ದಾರೆ.
ಸೌರ ಮಿಷನ್ ಆದಿತ್ಯವನ್ನು 2022-23 ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮೂರನೇ ಚಂದ್ರಯಾನ ಮಿಷನ್ ಅನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ. ಶುಕ್ರವನ್ನು ಅಧ್ಯಯನ ಮಾಡಲು ಮತ್ತೊಂದು ಮಿಷನ್ ಕೂಡ ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರವಾಗಿ ಈಗಾಗಲೇ ಎತ್ತರಕ್ಕೆ ಏರಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನ್ಯೂಸ್ 13