ಶಿರಸಿ: ಇಲ್ಲಿಯ ವಿಭಾಗೀಯ ಅಂಚೆ ವಿಭಾಗೀಯ ಕಚೇರಿಯಲ್ಲಿ ಡಿ. 27 ರಂದು ಮಧ್ಯಾಹ್ನ 3 ಗಂಟೆಗೆ ಪಿಂಚಣಿ ಅದಾಲತ್ ನಡೆಸಲು ಉದ್ದೇಶಿಸಲಾಗಿದೆ.
ಶಿರಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಹುದ್ದೆಗಳ ಪಿಂಚಣಿದಾರರ ಕುಂದುಕೊರತೆಗಳನ್ನು ಅದಾಲತ್‍ನಲ್ಲಿ ಚರ್ಚಿಸಲಾಗುವುದು. ಈ ಅದಾಲತ್‍ನಲ್ಲಿ ಅಂಚೆ ಕಚೇರಿ ಮೂಲಕ ಪಿಂಚಣಿ ಪಡೆಯುತ್ತಿರುವ ಇತರ ವರ್ಗದ ಪಿಂಚಣಿದಾರರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಈ ಅದಾಲತ್‍ನಲ್ಲಿ ಭಾಗವಹಿಸುವವರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಅದಾಲತ್‍ಗೆ ಸಂಬಂಧಪಟ್ಟ ಹಾಗೆ ಯಾರಾದರೂ ದೂರುಗಳನ್ನು ಹೊಂದಿದ್ದರೆ ಅಂಚೆ/ ಇ-ಮೇಲ್ ಮೂಲಕ ವಿವರಗಳೊಂದಿಗೆ ಕಚೇರಿಗೆ ಡಿ. 22 ರಂದು ಅಥವಾ ಅದಕ್ಕೂ ಮೊದಲು ತಲುಪುವಂತೆ ಕಳುಹಿಸಬಹುದು ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.