• first
  second
  third
  previous arrow
  next arrow
 • ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಮಾಲೋಚನ ಸಭೆ ಯಶಸ್ವಿ

  300x250 AD

  ಶಿರಸಿ: ಧಾರವಾಡ ಸಹಕಾರಿ ಹಾಲು ಒಕ್ಕೂಟದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳ ಸಮಾಲೋಚನ ಸಭೆಯನ್ನು ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ಡಿ.8 ರ ಬುಧವಾರದಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

  ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಅವರನ್ನು ಜಿಲ್ಲೆಯ ನಿರ್ದೇಶಕರುಗಳು ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಸಭೆಗೆ ಸ್ವಾಗತಿಸಿದರು.

  ಧಾರವಾಡ ಸಹಕಾರಿ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೆ ಹೆಗಡೆ ಸಭೆಯ ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕೋರೊನಾ ಸೋಂಕಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಧನ್ಯವಾದ ಸಲ್ಲಿಸಿದರು. ಸಮಸ್ಯೆಗಳು ಹಲವಿದ್ದರೂ ಸಹ ಪಶು ಆಹಾರದ ಬೆಲೆಯನ್ನು ಏರಿಸದೇ ಮತ್ತು ಹಾಲಿನ ದರವನ್ನು ಕಡಿತಗೊಳಿಸಲಾಗಿಲ್ಲ, ಪಶು ಆಹಾರದ ಬಳಕೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನದಾಗಿ ಮಾಡುತ್ತಿದ್ದು, ಹಾಲಿನ ಗುಣಮಟ್ಟವೂ ಸಹ ಉತ್ತಮವಾಗಿದೆ ಎಂದರು. ಪಿ.ಪಿ.ಪಿ. ಯೋಜನೆಯ ಅಡಿಯಲ್ಲಿ ಪ್ಯಾಕಿಂಗ್ ಘಟಕದ ಕಟ್ಟದ ಕಾಮಗಾರಿಯನ್ನು ಶೀಘ್ರದಲ್ಲೆಯೇ ಮುಗಿಸಿ ಘಟಕವನ್ನು ಪ್ರಾರಂಭಿಸಲು ಮುತುವರ್ಜಿಯನ್ನು ವಹಿಸಿರುವುದಕ್ಕೆ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದರು. ಕೇವಲ ಹಾಲು ಮತ್ತು ಹಾಲಿನ ಉತ್ಪನ್ನದಿಂದ ಲಾಭವನ್ನು ಮಾಡಲು ಸಾಧ್ಯವಿಲ್ಲ, ಹಾಲಿನಿಂದ ಇತರೇ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವುದರಿಂದ ಒಕ್ಕೂಟ ಲಾಭ ಮಾಡಲು ಸಾಧ್ಯವಾಗುತ್ತದೆ, ಆದ್ದರಿಂದ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಒಕ್ಕೂಟದಿಂದ ಹಾಲಿನ ಉತ್ಪನ್ನಗಳನ್ನು ಖರೀದಿಸಿ ತಮ್ಮ ಸಂಘಗಳ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಕುರಿತಂತೆ ಕಾರ್ಯಪ್ರವರ್ತಕರಾಗುವಂತೆ ಕರೆ ನೀಡಿದರು.

  300x250 AD

  ಎನ್.ಡಿ.ಡಿ.ಬಿ. ಇಂದ ಪ್ರತ್ಯೇಕ ಒಕ್ಕೂಟದ ರಚನೆಗೆ ಅನುಮೋದನೆಯನ್ನು ನೀಡಿದ್ದು, ಪ್ರಸ್ತುತವಾಗಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಕ್ರಮವಿಟ್ಟರಿವುದರಿಂದ, ಹಾವೇರಿ ಜಿಲ್ಲೆಯ ಪ್ರತ್ಯೇಕತೆಯ ಎಲ್ಲಾ ವ್ಯವಹಾರಗಳನ್ನು ಮುಗಿಸಿದ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಕುರಿತು ಕ್ರಮವಿಡಲಾಗುವುದು ಎಂದರು. ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ದೇಶದಾದ್ಯಂತ ಒಳ್ಳೆಯ ಬೇಡಿಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಾಲಿನ ದರ ಹೆಚ್ಚಾಗುವ ಸಾಧ್ಯತೆಯಿದ್ದು, ಇದರಿಂದ ಜಿಲ್ಲೆಯ ಹೈನುಗಾರಿಕೆಗೆ ಒಳ್ಳೆಯ ಭವಿಷ್ಯವಿದ್ದು, ಹೈನುಗಾರಿಕೆಯಿಂದ ನಾವೆಲ್ಲರೂ ವಿಮುಖರಾಗದಂತೆ ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಂಘದ ಹಾಲು ಪೂರೈಸುವ ಪ್ರತಿಯೊಬ್ಬ ಸದಸ್ಯನೂ ಕೂಡ ಕಲ್ಯಾಣ ಸಂಘದ ಸದಸ್ಯತ್ವ ಪಡೆದು ಕಲ್ಯಾಣ ಸಂಘದಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡಲು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ತಿಳಿಸಿದರು.

  ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಂಘಗಳ ಸಮಸ್ಯೆಗಳಾದ ರಾಸು ವಿಮೆ, ಪಶು ವೈದ್ಯರ ಕೊರತೆ, ಸಂಘಗಳ ಸ್ವಂತ ಕಟ್ಟಡ, ಸಂಘಗಳಲ್ಲಿನ ತಾಂತ್ರಿಕ ಸಮಸ್ಯೆ, ಹಾಲಿನ ದರ ಹೆಚ್ಚಳ, ಸಿಬ್ಬಂದಿಗಳಿಗೆ ನೀಡಲಾಗುವ ಪೆÇ್ರೀತ್ಸಾಹ ಧನದಲ್ಲಿ ಹೆಚ್ಚಳದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕೆ.ಎಂ.ಎಫ್.ನಲ್ಲಿನ 14 ಒಕ್ಕೂಟದಲ್ಲಿ ಈಗ ನಮ್ಮ ಒಕ್ಕೂಟ 6 ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಒಕ್ಕೂಟವನ್ನು ಇನ್ನೂ ಉನ್ನತ ಸ್ಥಾನಕ್ಕೆ ತಲುಪುವಂತೆ ಮಾಡಲು ನಾವೆಲ್ಲರೂ ಒಗ್ಗೂಡಿ ಶ್ರಮವಹಿಸಬೇಕಾಗಿದೆ ಎಂದು ತಿಳಿಸಿದರು. ಒಕ್ಕೂಟವು ಸದೃಢವಾಗಿ ಬೆಳೆದಲ್ಲಿ ಮಾತ್ರ ಸಂಘಗಳ ಬಲವರ್ಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಆ ಮೂಲಕ ಹಾಲು ಉತ್ಪಾದಕರಿಗೂ ಸಹ ಹೆಚ್ಚಿನ ದರವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
  ಇದೇ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಭೆಗೆ ತಿಳಿಸಿದ ಸಲಹೆ ಸೂಚನೆಗಳ ಕುರಿತು ಮುಕ್ತವಾಗಿ ಚರ್ಚಿಸಿದ ಅವರು ಸಲಹೆ ಸೂಚನೆಗಳ ಕುರಿತು ಕೈಗೊಳ್ಳುವ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಮುಂದುವರೆದು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರತ್ಯೇಕ ಹಾಲು ಒಕ್ಕೂಟ ಮಾಡುವುದಾದಲ್ಲಿ ಅದಕ್ಕೆ ತಾವು ಸಂಪೂರ್ಣ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.


  ನಂತರ ಜಿಲ್ಲೆಯ ನಿರ್ದೇಶಕರುಗಳು ಅಧ್ಯಕ್ಷ ಶಂಕರ ವಿ ಮುಗದ ಅವರಿಗೆ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಹಾಗೂ ಸೋಂದಾ ಮತ್ತು ಕಡಬಾಳ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೂ ಸಹ ಒಕ್ಕೂಟದ ಅಧ್ಯಕ್ಷರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಒಕ್ಕೂಟದ ಅಧ್ಯಕ್ಷ ಶಂಕರ ವಿ ಮುಗದ ಅವರು ಧಾರವಾಡ ಸಹಕಾರಿ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೆ ಹೆಗಡೆಯವರಿಗೆ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
  ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಪರಶುರಾಮ ವಿ ನಾಯ್ಕ ಅವರು ಮಾತನಾಡಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಳಿಗೆ ಹೆಚ್ಚಿನ ಬೇಡಿಕೆ ಇದ್ದು, ಉತ್ತಮ ಗುಣಮಟ್ಟದ ಹಾಲಿನಿಂದ ಮಾತ್ರ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾಡಲು ಸಾಧ್ಯವಾಗುವ ಕಾರಣ ಈ ನಿಟ್ಟಿನಲ್ಲಿ ಎಲ್ಲಾ ಸಂಘಗಳು ಉತ್ತಮ ಗುಣಮಟ್ಟದ ಹಾಲನ್ನು ಶೇಖರಣೆ ಮಾಡಲು ಕರೆ ನೀಡಿದರು.
  ಇನ್ನೊಬ್ಬ ನಿರ್ದೇಶಕ ಶಂಕರ ಪಿ ಹೆಗಡೆ ಸಭೆಗೆ ಶುಭಕೋರಿದರು. ಜಿಲ್ಲಾ ಮುಖ್ಯಸ್ಥ ಎಸ್.ಎಸ್.ಬಿಜೂರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿಸ್ತರಣಾಧಿಕಾರಿಯಾದ ಪ್ರಕಾಶ ಕೆ ಸ್ವಾಗತಿಸಿದರೆ, ದಯಾನಂದ ಎ ಎನ್ ವಂದಿಸಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ಅಧಿಕಾರಿಗಳಾದ ಶರಣು ಮೆಣಸಿನಕಾಯಿ, ಬಸವರಾಜ ಸಲೋನಿ, ಶಿರಸಿ ಉಪ ವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರುಗಳಾದ ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ, ಚಂದನ ನಾಯ್ಕ, ಜಯಂತ ಪಟಗಾರ ಹಾಗೂ ಇವರುಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top