ಶಿರಸಿ: ಇಂದು ವಾಯುಪಡೆಯ ಹೆಲಿಕಾಪ್ಟರ್ ಪತನದಿಂದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್ ರಾವತ್ ಹಾಗೂ ಅವರ ಕುಟುಂಬದ ಸದಸ್ಯರು ದುರ್ಮರಣ ಹೊಂದಿರುವುದು ತುಂಬಾ ಖೇದದ ಸಂಗತಿ. ರಾಷ್ಟ್ರ ರಕ್ಷಣೆಯ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದ ಅವರ ಅನುಭವ ಹಾಗೂ ಸೇವೆ ದೇಶಕ್ಕೆ ಅತ್ಯಂತ ಅವಶ್ಯವಾಗಿತ್ತು. ಕರ್ತವ್ಯದ ನಡುವೆಯೇ ಅಕಾಲಿಕವಾಗಿ ಸಾವನ್ನಪ್ಪಿದ ಅವರ ಚೈತನ್ಯಕ್ಕೆ ಪರಮಾತ್ಮ ಸದ್ಗತಿ ಅನುಗ್ರಹಿಸಲಿ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.