ಶಿರಸಿ: ತಾಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ವಿದ್ಯಾರ್ಥಿನಿ ಕಾಂಚನಾ ದಿನೇಶ ಗೌಡ ಇವಳು ಉಪಪ್ರಾದೇಶಿಕ ಕೇಂದ್ರ ಕಾರವಾರ ಹಾಗೂ ಇಕೋ ಕ್ಲಬ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಪ್ರಬಂಧ ಸ್ಪರ್ಧೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಡಾ. ವಿಕ್ರಮ್ ಸಾರಾಭಾಯಿಯವರ ಕೊಡುಗೆ ಎಂಬ ವಿಷಯದ ಅಡಿಯಲ್ಲಿ ಭಾಗವಹಿಸಿ, ಸ್ಥಾನವನ್ನು ಪಡೆದು ನಮ್ಮ ಶಾಲೆಗೆ ಮತ್ತು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾಳೆ. ಆಕೆಯ ಸಾಧನೆಗೆ ಆಡಳಿತ ಮಂಡಳಿಯವರು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಈ ವಿದ್ಯಾರ್ಥಿನಿಗೆ ವಿಜ್ಞಾನ ಶಿಕ್ಷಕ ಆರ್.ಕೆ.ಚವ್ಹಾಣರವರು ಮಾರ್ಗದರ್ಶಕರಾಗಿದ್ದರು.