• first
  second
  third
  previous arrow
  next arrow
 • ಜಿಲ್ಲೆಯ 2,200 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

  300x250 AD

  ಕಾರವಾರ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ರಾಜ್ಯಕ್ಕೆ ಬೆಳಕು ನೀಡಿದ ನೆಲದ ಜನರು ಇಂದಿಗೂ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.ಉತ್ತರ ಕನ್ನಡ ಜಿಲ್ಲೆಯ 80ಕ್ಕೂ ಹೆಚ್ಚು ಪಂಚಾಯಿತಿ ವ್ಯಾಪ್ತಿಯ 2200ರಷ್ಟು ಮನೆಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನರಿಗೆ ರಾತ್ರಿ ವೇಳೆ ಸೀಮೆ ಎಣ್ಣೆ ದೀಪವೇ ಆಸರೆಯಾಗಿದೆ.

  ಗುಡ್ಡ, ಅರಣ್ಯದೊಳಗಿನ ಮನೆ, ಚದುರಿದಂತಿರುವ ಗ್ರಾಮಗಳು, ಒಂಟಿ ಮನೆ, ಹೀಗೆ ಹಲವು ಕಾರಣಗಳಿಂದ ಜಿಲ್ಲೆಯ ಹಲವು ಕುಟುಂಬಗಳಿಗೆ ಇನ್ನೂ ವಿದ್ಯುತ್ ಸಿಕ್ಕಿಲ್ಲ. ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳ 86 ಪಂಚಾಯಿತಿಗಳಲ್ಲಿ 44 ಪಂಚಾಯಿತಿ ವ್ಯಾಪ್ತಿಯ 1000 ಮನೆಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲ. ಅದೇ ರೀತಿ ಜಿಲ್ಲೆಯ ಜೋಯಿಡಾ, ದಾಂಡೇಲಿ, ಅಂಕೋಲಾ ಸೇರಿ ಉಳಿದ ತಾಲೂಕುಗಳಲ್ಲಿ 1500ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಇಲ್ಲ. ಹೀಗೆ ಬಹುತೇಕ ಸಂಪರ್ಕ ರಹಿತರು ಬಿಪಿಎಲ್ ಕಾರ್ಡದಾರರೇ ಆಗಿದ್ದಾರೆ.

  ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಬ್ಬಂದಿ ನಡೆಸುತ್ತಿರುವ ಸಮೀಕ್ಷೆಯಿಂದ ಬೆಳಕು ಕಾಣದ ಇಂತಹ ಮನೆಗಳ ಸಂಖ್ಯೆ ತಿಳಿಯುತ್ತಿದೆ. ಸರ್ಕಾರದ ಹಲವು ಯೋಜನೆಗಳು ಜಾರಿಗೊಂಡು ಪೂರ್ಣಗೊಂಡರೂ ವಿದ್ಯುತ್ ಸಂಪರ್ಕ ರಹಿತರನ್ನು ಸಮಗ್ರವಾಗಿ ಗುರುತಿಸಿ ಸಂಪರ್ಕ ನೀಡುವ ಕಾರ್ಯವಾಗಿಲ್ಲ. ಯೋಜನೆ ಚಾಲ್ತಿಯಲ್ಲಿರುವಾಗ ಬರದ ಸಿಬ್ಬಂದಿ ಯೋಜನೆ ಮುಕ್ತಾಯದ ನಂತರ ಬಂದು ಅರ್ಜಿ ನೀಡುವಂತೆ ಹೇಳುತ್ತಾರೆ. ಅರ್ಜಿ ನೀಡಿದರೂ ಅದರ ಪರಿಶೀಲನೆ ಕೂಡ ಆಗುತ್ತಿಲ್ಲ. ಹಲವು ವರ್ಷಗಳ ಹೋರಾಟದಿಂದ ಬೇಸತ್ತಿದ್ದೇವೆ ಎನ್ನುತ್ತಾರೆ.ಶಿರಸಿಯ ಸವಲಹಕ್ಲು ಭಾಗದ ನಿವಾಸಿಗಳು.

  300x250 AD

  ಶೇ. 10ಕ್ಕೆ ಪ್ರಾಮುಖ್ಯತೆವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪರಿಗಣಿಸಲಾದ ಹಳ್ಳಿಗಳಲ್ಲೂ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಆದರೆ ಯಾವುದೇ ಹಳ್ಳಿಯ ಕನಿಷ್ಠ ಶೇ. 10ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದರೆ ಮತ್ತು ಸಾರ್ವಜನಿಕ ಸ್ಥಳಗಳಾದ ಶಾಲೆ, ಪಂಚಾಯಿತಿ ಕಚೇರಿ, ಆರೋಗ್ಯ ಕೇಂದ್ರ ಹಾಗೂ ಸಮುದಾಯ ಕೇಂದ್ರಕ್ಕೆ ವಿದ್ಯುತ್ ಸಂಪರ್ಕವಿದ್ದರೆ ಅಂತಹ ಗ್ರಾಮವನ್ನು ವಿದ್ಯುದೀಕರಣಗೊಂಡ ಗ್ರಾಮ ಎಂದು ಹೆಸ್ಕಾಂ ಪರಿಗಣಿಸುತ್ತದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ, ಈಗಾಗಲೇ ದೀನದಯಾಳ ಗ್ರಾಮೀಣ ವಿದ್ಯುದೀಕರಣ ಯೋಜನೆ, ಸೌಭಾಗ್ಯ ಯೋಜನೆಯಡಿ ಹಲವು ಸಂಪರ್ಕ ರಹಿತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಯೋಜನೆ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಅರ್ಜಿ ನೀಡದ, ಪಂಚಾಯಿತಿ ವತಿಯಿಂದ ಸಮರ್ಪಕ ಸಮೀಕ್ಷೆಯಾಗದ ಕಾರಣ ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪರ್ಕ ರಹಿತರಿದ್ದಾರೆ. ಪ್ರಸ್ತುತ ಪಂಚಾಯಿತಿ ವತಿಯಿಂದ ಮತ್ತೆ ಸಮೀಕ್ಷೆ ಮಾಡಿ ಫಲಾನುಭವಿಗಳ ಪಟ್ಟಿ ನೀಡುವಂತೆ ತಿಳಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top