ಶಿರಸಿ: ಶಿರಸಿಯ ಲಯನ್ಸ್ ಶಾಲೆ ಸಭಾಭವನದಲ್ಲಿ ಇಂದು ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ, ಲಯನ್ಸ್ ಕ್ಲಬ್, ಶಿರಸಿ ಲಿಯೋ ಕ್ಲಬ್ ಶಿರಸಿ ಇವುಗಳ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಅಧ್ಯಕ್ಷರು ‘ಸ್ವಯಂ’ ಬೆಂಗಳೂರಿನ ಸುಬ್ರಾಯ ಎಂ. ಹೆಗಡೆ ಗೌರಿಬಣ್ಣಿಗೆ, ಇವರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಎಸ್ ಎಂ ಹೆಗಡೆ ಮಾತನಾಡುತ್ತಾ, ಹಿರಿಯರು ಮುತುವರ್ಜಿಯಿಂದ ನಮಗಾಗಿ ಶ್ರಮವಹಿಸಿ ಕಟ್ಟಿಸಿದ ಶಿಕ್ಷಣ ಸಂಸ್ಥೆಗೆ ಬರುವಾಗಲೇ ನಾವು ಏನಾಗಬೇಕು ಎಂದು ವಿದ್ಯಾರ್ಥಿಗಳು ನಿರ್ಧರಿಸಬೇಕು. ವಿದ್ಯಾರ್ಥಿಗಳಿಗೆ ಸ್ವಯಂ ಶಿಸ್ತು ಇರಬೇಕು. ಅಲ್ಲದೇ ವಿದ್ಯಾರ್ಥಿಗಳು ತಮ್ಮ ಓದನ್ನು ಶಾಲೆಯ ಪಠ್ಯಕ್ರಮ ಗಳಿಗಷ್ಟೇ ಸೀಮಿತಗೊಳಿಸಿಕೊಳ್ಳದೇ ಬೇರೆ ಬೇರೆ ವಿಷಯಗಳ ಕುರಿತಾಗಿಯೂ ಕುತೂಹಲ ಮೂಡಿಸಿಕೊಳ್ಳಬೇಕು. ಪ್ರಶ್ನೆಗಳು ಜ್ಞಾನ ಸಂಪಾದನೆಗೆ ಬಹುಮುಖ್ಯ. ಭಾಷಾ ಪ್ರೀತಿ ಹೆಚ್ಚಿಸಿಕೊಳ್ಳಿ, ಸಮಯದ ಸದ್ವಿನಿಯೋಗ ಮಾಡಿಕೊಳ್ಳಿ, ಬರವಣಿಗೆಯಂತಹ ಅಭಿವ್ಯಕ್ತಿ ಕಲೆ ಬಹಳ ಮುಖ್ಯ. ಇಂತಹ ಸಾಕಷ್ಟು ಹುರಿದುಂಬಿಸುವ ಮಾತುಗಳ ಜೊತೆಜೊತೆಗೆ ಸರ್ಕಾರಿ ವಲಯದಲ್ಲಿ ಬರುವ ಉದ್ಯೋಗಗಳ ಬಗ್ಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಆರ್ ಎಸ್ ಹೆಗಡೆ ಅಧ್ಯಕ್ಷರು ‘ಸ್ವಯಂ’ ಶಿರಸಿ, ಲಯನ್ಸ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಎಂ.ಜೆ. ಎಫ್.ಲಯನ್ ಪ್ರಭಾಕರ್ ಹೆಗಡೆ, ಶಿರಸಿ, ಲಯನ್ಸ್ ಎಜುಕೇಶನ್ ಸೊಸೈಟಿ ಜಂಟಿ ಕಾರ್ಯದರ್ಶಿ ಲಯನ್ ವಿನಯ್ ಹೆಗಡೆ, ಲಯನ್ಸ್ ಎಜುಕೇಶನ್ ಸೊಸೈಟಿ ಸದಸ್ಯ ಲಯನ್ ಕೆ.ಬಿ. ಲೋಕೇಶ್ ಹೆಗಡೆ ಇವರುಗಳು ಉಪಸ್ಥಿತರಿದ್ದರು.
ಲಯನ್ಸ್ ಶಾಲೆ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಇವರು ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ ಸದಸ್ಯ ಲಯನ್ ಶ್ರೀಕಾಂತ್ ಹೆಗಡೆ ವಂದನಾರ್ಪಣೆ ನೆರವೇರಿಸಿದರು. ಸಹಶಿಕ್ಷಕಿ ಚೇತನಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದ ಈ ಕಾರ್ಯಕ್ರಮದ ಪ್ರಯೋಜನ ಪಡೆದರು.