• first
    second
    third
    previous arrow
    next arrow
  • ಭಗವದ್ಗೀತಾ ಅಭಿಯಾನ; ಚಂದನ ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

    300x250 AD


    ಶಿರಸಿ: ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ(ರಿ) ಶ್ರೀ ಸೊಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರು ನಡೆಸಿದ ಶ್ರೀ ಭಗವದ್ಗೀತಾ ಅಭಿಯಾನ 2021 ರ ಅಂಗವಾಗಿ ಶಿರಸಿಯ ಎಂ ಇ ಎಸ್ ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಸ್ಫರ್ದೆಗಳಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.


    ವಿದ್ಯಾರ್ಥಿಗಳಾದ 10ನೇ ತರಗತಿಯ ಯಶಸ್ವಿನಿ ಹೆಗಡೆ (ಹಿರಿಯರ ವಿಭಾಗ ಕಂಠಪಾಠ ಸ್ಪರ್ದೇ), 5ನೇ ವರ್ಗದ ವರ್ಷಿಣಿ ಹೆಗಡೆ (ಕಿರಿಯರ ವಿಭಾಗ ಕಂಠಪಾಠ) 5ನೇ ವರ್ಗದ ಅನ್ವಿತಾ ಆರ್ ವಿ(ಕಿರಿಯರ ವಿಭಾಗ, ಭಾಷಣ ಸ್ಫರ್ಧೆ) ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    300x250 AD


    ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಮಾರ್ಗದರ್ಶಿ ಶಿಕ್ಷಕ ಸಿಂಧೂರ್ ಭಟ್ ಇವರಿಗೆ ಕಾರ್ಯದರ್ಶಿ ಎಲ್ ಎಂ ಹೆಗಡೆ, ಆಡಳಿತಾಧಿಕಾರಿ ವಿದ್ಯಾ ನಾಯ್ಕ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top