• first
  second
  third
  previous arrow
  next arrow
 • ಪರಿಷತ್ ಚುನಾವಣೆಯಲ್ಲಿ ಉಳ್ವೇಕರ್ ಗೆಲುವು ನಿಶ್ಚಿತ; ಶಾಂತಾರಾಮ ಸಿದ್ದಿ ವಿಶ್ವಾಸ

  300x250 AD

  ಯಲ್ಲಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೆಕರ್ ಗೆಲುವು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ವಿಶ್ವಾಸ ವ್ಯಕ್ತಪಡಿಸಿದರು.


  ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಪಕ್ಷದ ಮುಖಂಡರು, ಸಚಿವರು, ಕಾರ್ಯಕರ್ತರು ಮತದಾರರನ್ನು ಭೇಟಿಯಾಗಿ ಮತ ಯಾಚಿಸಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿದ್ದು, ಪಕ್ಷದ ಅಭ್ಯರ್ಥಿ 500 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.


  ಬಿಜೆಪಿ ಅಂತ್ಯೋದಯದ ಸಿದ್ಧಾಂತ ಹೊಂದಿದ ಪಕ್ಷವಾಗಿದ್ದು, ಅದರಡಿಯಲ್ಲಿ ಅನೇಕ ನಾಯಕರು ದೇಶದ ಪ್ರಗತಿಗಾಗಿ ಶ್ರಮಿಸಿದ್ದಾರೆ. ಈ ಚುನಾವಣೆಯಲ್ಲೂ ಅಂತ್ಯೋದಯ ಸಿದ್ಧಾಂತ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳ ಜನಪರ ಕಾರ್ಯಕ್ರಮಗಳು ಗೆಲುವಿಗೆ ಪೂರಕವಾಗಲಿದೆ. ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದರು.

  300x250 AD


  ಬಿಜೆಪಿ ತಾಲೂಕಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ ಮಾತನಾಡಿ, ತಾಲೂಕಿನಲ್ಲಿ 170 ಮತದಾರರಿದ್ದು, 160 ಕ್ಕೂ ಹೆಚ್ಚು ಜನ ಬಿಜೆಪಿ ಬೆಂಬಲಿಗರೇ ಆಗಿದ್ದಾರೆ. ಎಲ್ಲ ಮತದಾರರನ್ನು 2 ಬಾರಿ ಭೇಟಿಯಾಗಿ ಮತ ಯಾಚಿಸಿದ್ದೇವೆ. ಜಿಲ್ಲೆಯಲ್ಲಿ ಸಚಿವರು, ಶಾಸಕರು ಸೇರಿ ಎಲ್ಲ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.


  ಪಕ್ಷದ ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ, ಮಾಧ್ಯಮ ಸಂಚಾಲಕ ಕೆ.ಟಿ.ಹೆಗಡೆ, ಎಸ್.ಟಿ ಮೋರ್ಚಾದ ರಾಮನಾಥ ಸಿದ್ದಿ ಇದ್ದರು.

  Share This
  300x250 AD
  300x250 AD
  300x250 AD
  Back to top