ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಬಿಸಗೋಡದ ನಾಗರಕಾನ್ ಎಂಬಲ್ಲಿ ವಾಸುದೇವ ಬಾಳೆಕೊಡ್ಲ ಎಂಬವರಿಗೆ ಸೇರಿದ ಆಕಳ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದೆ. ಕರವುನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರಿಂದ ಹೊತ್ತೊಯ್ಯಲು ಸಾಧ್ಯವಾಗಿಲ್ಲ, ನಂತರ ಅದನ್ನು ಬಿಟ್ಟು ನಾಯಿಯನ್ನು ಹಿಡಿದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಭಾಗದಲ್ಲಿ ದಿನೇ ದಿನೇ ಚಿರತೆಯ ಕಾಟ ಹೆಚ್ಚಿದ್ದು, ಕಳೆದ ಎರಡು ವಾರಗಳ ಹಿಂದೆ ಮೂರು ದನಗಳನ್ನು ಕೊಂದಿತ್ತು. ಚಿರತೆ ಹಾವಳಿ ನಿಯಂತ್ರಿಸುವoತೆ ಅರಣ್ಯ ಇಲಾಖೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.