ಕುಮಟಾ: ಕಾಳುಮೆಣಸು ಮತ್ತು ಅಡಕೆ ತುಂಬಿದ ಲಾರಿಯೊಂದು ಮಂಗಳೂರು ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದಾಗ ಹೊಸೂರು ಸೇತುವೆಯ ಸಮೀಪ ಮಗುಚಿ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಚಾಲಕ ಗಂಭೀರ ಗಾಯಗೊಂಡಿದ್ದಾನಲ್ಲದೇ ಲಾರಿಯಲ್ಲಿದ್ದ ಕಾಳುಮೆಣಸು, ಅಡಕೆ ಚೀಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಐಆರ್‌ಬಿ ಕಂಪನಿಯವರು ಚತುಷ್ಪಥ ಕಾಮಗಾರಿ ಕೈಗೊಂಡಿದ್ದು ಕೆಲವೆಡೆ ಪೂರ್ಣಗೊಳಿಸದೇ ಇರುವುದರಿಂದ ಇಂತಹ ಅಪಘಾತಗಳಿಗೆ ಕಾರಣವಾಗಿದೆ. ಅಪಘಾತವಾದ ಸ್ಥಳವು ತೀವ್ರ ತಿರುವು ಹೊಂದಿರುವುದರಿAದ ಚಾಲಕರ ನಿಯಂತ್ರಣ ತಪ್ಪಿಹೋಗುವಂತಾಗಿದೆ. ಇದು ಅವೈಜ್ಞಾನಿಕವಾಗಿದ್ದು ಸೇತುವೆ ಮುರಿದ ನಂತರ ಏಕಾಏಕಿ ತಿರುವು ಬೇಡ ಎಂದು ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಕಂಪನಿಯವರು ತಮ್ಮ ಕೆಲಸ ಮುಂದುವರಿಸಿದ್ದರು. ಇಲ್ಲಿಯ ರಸ್ತೆ ಸರಿಪಡಿಸದಿದ್ದಲ್ಲಿ ಮುಂದೆಯೂ ಕೂಡ ಇಂತಹ ಘಟನೆ ನಡೆಯುವ ಸಾಧ್ಯತೆಯಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.