• Slide
    Slide
    Slide
    previous arrow
    next arrow
  • ಡಾ. ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

    300x250 AD

    ಹೊನ್ನಾವರ: ಅಳ್ಳಂಕಿ ಹಳ್ಳೇರ ಸಮಾಜ ಮಂದಿರದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಸಮಾಜ ಮತ್ತು ಸಾಂಸ್ಕøತಿಕ ಕಲಾ ಅಭಿವೃದ್ದಿ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕಿರು ಪುತ್ಥಳಿಗೆ ಹಾಗೂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ, 65ನೇ ಮಹಾಪರಿನಿರ್ವಾಣ ದಿನ ಆಚರಿಸಿದರು.

    ಈ ಸಂದರ್ಭದಲ್ಲಿ ರಮೇಶ್ ತಂಡದವರಿರಂದ ಅಂಬೇಡ್ಕರ್ ಸಾಧನೆ, ಸಾಹಸಗಾತೆಯನ್ನು ಗೀತೆಯ ಮೂಲಕ ಪ್ರಸ್ತುತ ಪಡಿಸಿದರು. ಉಪವಲಯ ಅರಣ್ಯಾಧಿಕಾರಿ ಇಸಫ್ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಾಜದಲ್ಲಿ ಬದಲಾವಣೆಯ ಬೆಳಕನ್ನು ಚೆಲ್ಲಿ, ಸಮಾನತೆ, ಸಾಮಾಜಿಕ ನ್ಯಾಯ ನೀಡುವಲ್ಲಿ ಅವರ ಮಹತ್ತರ ಕೊಡುಗೆಯನ್ನು ಸ್ಮರಿಸಿ ಕೊಂಡಾಡಿದರು. ಹೊನ್ನಾವರ ಪೆÇಲೀಸ್ ಠಾಣೆಯ ಆರಕ್ಷ ರಾಯಿಸ್ ಭಗವಾನ್ ಅವರು ಮಾತನಾಡಿ, ಜಾತಿಯತೆ,ಆಚಾರ-ವಿಚಾರದಲ್ಲಿ, ಸಮಾನತೆ ಕುರಿತಂತೆ ಇನ್ನೂ ಹಲವಾರು ವಿಚಾರಗಳನ್ನು ಸಂವಿಧಾನದ ಮೂಲಕ ಅವರು ನೀಡಿದ ಕೊಡುಗೆಯನ್ನು ಜೀವನದಲ್ಲಿ ಪ್ರತಿನಿತ್ಯ ಸ್ಮರಿಸಿ ಅಳವಡಿಸಿಕೊಳ್ಳುವುದು ಅವರಿಗೆ ನೀಡುವ ಗೌರವ ಎಂದು ಕರೆ ನೀಡಿದರು.

    300x250 AD

    ಡಾ. ಬಿ.ಆರ್ ಅಂಬೇಡ್ಕರ್ ಸಮಾಜ ಮತ್ತು ಸಾಂಸ್ಕೃತಿಕ ಕಲಾ ಅಭಿವೃದ್ದಿ ಸಂಘದ ಅಧ್ಯಕ್ಷ ಜಿ.ಟಿ ಹಳ್ಳೇರ್ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಬೆಳಕನ್ನು ಚೆಲ್ಲಿದರು.ಸಂವಿಧಾನದ ಮೂಲಕ ನೀಡಿದ ಮೀಸಲಾತಿಗಳು ಪ್ರಸ್ತುತವಾಗಿದೆ.ಪ್ರಜಾಪ್ರಭುತ್ವ ಸದೃಡವಾಗಿರಲು ಕಾರಣಿಭೂತವಾಗಿದೆ. ಈ ಮೂಲಕ ಅವರು ಸಮಾನತೆಯ ಸಂಕೇತವಾಗಿದ್ದಾರೆ ಎಂದು ಶ್ಲಾಘಿಸಿದರು. ಹಳ್ಳೇರ್ ಸಮಾಜದ ರುದ್ರಭೂಮಿಗೆ ಮೂಲ ಸೌಕರ್ಯಗಳ ಕೊರತೆ ಇದೆ.ಸರ್ಕಾರದ ಅನುದಾನದ ಅವಶ್ಯಕತೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.

    ಹೆರಂಗಡಿ ಗ್ರಾಮ ಪಂಚಾಯತ ಕಾರ್ಯದರ್ಶಿ ಎಮ್.ಕೆ ನಾಯ್ಕ ಬಿಲ್ ಕಲೆಕ್ಟರ್ ನಾಗರಾಜ ಗೌಡ, ಹಳ್ಳೇರ ಸಮಾಜದ ಪ್ರಮುಖರಾದ ಅಣ್ಣಪ್ಪ ಹಳ್ಳೇರ್, ಜಟ್ಟಿ ಹಳ್ಳೇರ್, ಈರಾ ಹಳ್ಳೇರ್, ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ಸುಕ್ರಿ ಹಳ್ಳೇರ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ ಸದಸ್ಯ ಗಣೇಶ್ ಹಳ್ಳೇರ್, ಅನಂತ ಹಳ್ಳೇರ್, ರಾಜು ಹಳ್ಳೇರ, ಮಾದೇವಿ ಹಳ್ಳೇರ, ಜನಾರ್ಧನ ಹಳ್ಳೇರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಮಾರುತಿ ಹಳ್ಳೇರ್ ಸ್ವಾಗತಿಸಿ,ನಿರೂಪಿಸಿದರು. ರಮೇಶ್ ಹಳ್ಳೇರ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top