• first
  second
  third
  previous arrow
  next arrow
 • ಶ್ರೀ ಕೃಷ್ಣೋತ್ಸವ; ಪ್ರತಿಭಾ ಪುರಸ್ಕಾರ-ಸನ್ಮಾನ

  300x250 AD

  ಅಂಕೋಲಾ: ಇಲ್ಲಿಯ ತೆಂಕಣಕೇರಿಯ ಶ್ರೀ ಕೃಷ್ಣ ಮಿತ್ರ ಮಂಡಳಿಯ 33 ನೇ ವರ್ಷದ ಶ್ರೀ ಕೃಷ್ಣೋತ್ಸವ ನಿಮಿತ್ತ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಜರುಗಿತು.

  ಪಿಯುಸಿ ದ್ವಿತೀಯ ವರ್ಷದಲ್ಲಿ ಊರಿಗೆ ಪ್ರಥಮ ಸ್ಥಾನ ಪಡೆದ ಪ್ರತೀಕ್ಷಾ ಪ್ರದೀಪ ನಾಯ್ಕ, ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿಘ್ನೇಶ ನಾರಾಯಣ ನಾಯ್ಕ ಮತ್ತು ಏಳನೆಯ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಶ್ರೀನಿಧಿ ಸುರೇಶ ನಾಯ್ಕ, ಅಶ್ವಿನಿ ಬಿ. ನಾಯ್ಕ, ಸಮೀಕ್ಷಾ ಸಂತೋಷ ನಾಯ್ಕರನ್ನು ಗೌರವಿಸಲಾಯಿತು.

  300x250 AD

  ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣನಿಗೆ ಬೆಳ್ಳಿ ಕಿರೀಟ ಸಮರ್ಪಿಸಿದ ಊರಿನ ಪ್ರಮುಖ ಲಕ್ಷ್ಮಣ ಮುಕುಂದ ಗಾಂವಕರ್ ಪತ್ನಿ ಗೀತಾ ಗಾಂವಕರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ವಿಠ್ಠಲದಾಸ ಕಾಮತ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರದಂತಹ ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಜೋಡಿಸಿದ್ದು ಮಾದರಿ. ಈ ಮೂಲಕ ಮಕ್ಕಳಲ್ಲಿ ಇನ್ನಷ್ಟು ಕಲಿಕೆಯ ಉತ್ಸಾಹ ಚಿಗುರಲು ಸಹಕಾರಿಯಾಗುತ್ತದೆ ಎಂದರು.

  ಅತಿಥಿಗಳಾಗಿ ಪ್ರಮುಖರಾದ ಪ್ರದೀಪ ಬೊಮ್ಮಯ್ಯ ನಾಯ್ಕ, ಸುಧೀರ ರಾಧಾಕೃಷ್ಣ ನಾಯ್ಕ, ಜಯಂತ ನಾರಾಯಣ ನಾಯ್ಕ, ಬಿಜೆಪಿ ಯುವಮೋರ್ಚಾ ಪ್ರಮುಖ ಪ್ರವೀಣ ಫಾಲ್ಗುಣ ನಾಯ್ಕ, ಮಂಡಳಿಯ ಗೌರವಾಧ್ಯಕ್ಷ ಶಿವಾನಂದ ರಾಯ್ಕರ್, ಅಧ್ಯಕ್ಷ ಮಂಜುನಾಥ ನಾರಾಯಣ ನಾಯ್ಕ, ಉಪಾಧ್ಯಕ್ಷ ಪ್ರದೀಪ ಉಮೇಶ ನಾಯ್ಕ, ಕಾರ್ಯದರ್ಶಿ ಪ್ರದೀಪ ಗಣಪತಿ ನಾಯ್ಕ, ಲತಾ ವಿ. ಕಾಮತ್ ವೇದಿಕೆಯಲ್ಲಿದ್ದರು. ನಾಗರಾಜ ಆಚಾರಿ ಸ್ವಾಗತಿಸಿದರು. ಗೌರೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಜಯಂತ ನಾಯ್ಕ ವಂದಿಸಿದರು.

  Share This
  300x250 AD
  300x250 AD
  300x250 AD
  Back to top