• first
    second
    third
    previous arrow
    next arrow
  • ಹೊನ್ನಾವರ ಆಸ್ಪತ್ರೆಯಲ್ಲಿಂದು ವಿಶ್ವ ಏಡ್ಸ್ ದಿನ ಆಚರಣೆ

    300x250 AD

    ಹೊನ್ನಾವರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್ನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ ಕಾರವಾರ, ಆರೋಗ್ಯ ಇಲಾಖೆ ಹೊನ್ನಾವರ, ಐ.ಸಿ.ಟಿ.ಸಿ ಕೇಂದ್ರ, ತಾಲೂಕಾ ಆಸ್ಪತ್ರೆ ಹೊನ್ನಾವರ ಇವುಗಳ ಸಂಯುಕ್ತಾಶ್ರಯದಲ್ಲಿ ಡಿ.8 ರಂದು ತಾಲೂಕಾ ಆಸ್ಪತ್ರೆಯಲ್ಲಿ ಮಧ್ಯಾಹ್ನ 3 ಘಂಟೆಗೆ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

    300x250 AD

    ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಉಷಾ ಹಾಸ್ಯಗಾರವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಆಡಳಿತ ವೈದ್ಯಾಧಿಕಾರಿ ರಾಜೇಶ ಕಿಣಿ ವಹಿಸಲಿದ್ದಾರೆ. ಹೆಚ್.ಐ.ವಿ ಮೂಲ ಮಾಹಿತಿ ವಿಷಯದ ಬಗ್ಗೆ ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರಕಾಶ ನಾಯ್ಕ ಮತ್ತು ಗರ್ಭಿಣಿ ಮಹಿಳೆ ಹಾಗೂ ಹೆಚ್.ಐ.ವಿ ಏಡ್ಸ್ ವಿಷಯದ ಬಗ್ಗೆ ಸ್ತ್ರೀ ರೋಗ ತಜ್ಞ ಡಾ. ಕೃಷ್ಣಾ ಜಿ ಉಪನ್ಯಾಸ ಮಾಡಲಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top