ಶಿರಸಿ: ಇಲ್ಲಿನ ನಾವು ನೀವು ಬಳಗವು ದಿವ್ಯಶ್ರೀ ಎಂಟರ್ಪ್ರೈಸ್ ಸಹಭಾಗಿತ್ವದಲ್ಲಿ ರಾಗ ವಿಹಾರ ಕಾರ್ಯಕ್ರಮವನ್ನು ವಿನಾಯಕ ಹಾಲ್ ನಲ್ಲಿ ನಡೆಸಿತು.
ಪ್ರಸಿದ್ದ ಗಾಯಕ ವಿನಾಯಕ ಹೆಗಡೆ ಮುತ್ಮುರಡು ಅವರು ಎರಡು ತಾಸುಗಳಿಗೂ ಅಧಿಕ ಕಾಲ ಭಕ್ತಿ ಭಾವದ ಗೀತೆಯಲ್ಲಿ ಪ್ರೇಕ್ಷಕರನ್ನು ಸೆಳೆದರು. ಗಾಯನಕ್ಕೆ ತಬಲಾದಲ್ಲಿ ಗಣೇಶ ಗುಂಡ್ಕಲ್, ಫಕ್ಕವಾಜ್ ನಲ್ಲಿ ನಾಗೇಂದ್ರ ವೈದ್ಯ, ಹಾರ್ಮೋನಿಯಂದಲ್ಲಿ ಸತೀಶ ಭಟ್ಟ ಹೆಗ್ಗಾರ, ತಾಳದಲ್ಲಿ ಅನಂತ ಭಟ್ಟ, ಶ್ರೀರಾಮ ಭಾಗವತ, ತಾನ್ಪೂರಾದಲ್ಲಿ ಮಲ್ಲಿಕಾ ವಿನಾಯಕ, ವಿದ್ಯಾ ಭಾಗವತ ಇತರರು ಸಹಕಾರ ನೀಡಿದರು.
ಇದಕ್ಕೂ ಮೊದಲು ಬಳಗದ ಪ್ರಮುಖ ವೈಶಾಲಿ ವಿ.ಪಿ.ಹೆಗಡೆ ದೀಪ ಬೆಳಗಿಸಿದರು. ದಿವ್ಯಾ ಹೆಗಡೆ, ಶ್ರೀಪತಿ ಹೆಗಡೆ ಕಿಬ್ಬಳ್ಳಿ, ನಾಗರಾಜ್ ಜೋಶಿ ಸೋಂದಾ, ದತ್ತ ಭಟ್ ಸೋಮಸಾಗರ ಇತರರು ಇದ್ದರು.
ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಸತೀಶ ಹೆಗಡೆ ಗೋಳಿಕೊಪ್ಪ ನಿರ್ವಹಿಸಿದರು. ಗಿರಿಧರ ಕಬ್ನಳ್ಳಿ ವಂದಿಸಿದರು.