• Slide
  Slide
  Slide
  previous arrow
  next arrow
 • INS ಕದಂಬ ನೌಕಾ ಸೈನಿಕರ ಸೈಕಲ್ ಜಾಥಾ; ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ

  300x250 AD

  ಶಿರಸಿ: 1971 ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತ ಗೆದ್ದು 50 ವರ್ಷಸಂದ ಈ ಸಂದರ್ಭದಲ್ಲಿ, ಕಾರವಾರದ INS ಕದಂಬದ ಸೈನಿಕರು 150 ಕಿ.ಮಿ ಸೈಕಲ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಮಂಗಳವಾರ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.


  ಭಾರತೀಯ ನೌಕಾದಳದ ಲೆಫ್ಟಿನೆಂಟ್ ಕಮಾಂಡರ್ ಆಶಿಶ್ ಜಾಯಲ್ ಮಾತನಾಡಿ ದೇಶ ರಕ್ಷಣೆಯ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಅರ್ಹ ಯುವ ಜನತೆ ಸೈನ್ಯಕ್ಕೆ ಸೇರಲು ವಿಪುಲ ಅವಕಾಶವಿದೆ ಎಂದರು. ವಿದ್ಯಾರ್ಥಿಗಳಿಗೆ ನೌಕಾಪಡೆಗೆ ಸೇರಲು ಬೇಕಾದ ಉಪಯುಕ್ತ ಮಾಹಿತಿ ನೀಡಿದರು.

  300x250 AD


  ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ ರಾಮು ಮಾತನಾಡಿ ಈ ಕಾರ್ಯಕ್ರಮ ಹಮ್ಮಿಕೊಂಡ ಮೂಲ ಉದ್ದೇಶ ಇಂದಿನ ಪೀಳಿಗೆಗೆ 1971 ರ ಯುದ್ಧದ ಕುರಿತು ಮಾಹಿತಿ ಒದಗಿಸುವದಲ್ಲದೆ, ಸೈನ್ಯಕ್ಕೆ ಸೇರಲು ಪ್ರೇರೇಪಿಸುವದಾಗಿದೆ ಎಂದರು.


  ಎನ್‍ಸಿಸಿ ಅಧಿಕಾರಿ ಡಾ ಟಿ ಎಸ್ ಹಳೇಮನೆ, ನಿವೃತ್ತ ಸೈನಿಕರು, ಸೈನಿಕರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯೆ ಡಾ.ಕೋಮಲಾ ಭಟ್ ಸ್ವಾಗತಿಸಿದರು. ಸತೀಶ ನಾಯಕ್ ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top