• first
  second
  third
  previous arrow
  next arrow
 • ಸ್ವರ್ಣವಲ್ಲಿಯಲ್ಲಿ ಸರ್ವಜ್ಞೇಂದ್ರ ಶ್ರೀಗಳ ಆರಾಧನಾ ಮಹೋತ್ಸವ

  300x250 AD

  ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ಮಂಗಳವಾರ ಶ್ರೀ ಮಠದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಿತು.


  ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳರ ಸಾನ್ನಿಧ್ಯದಲ್ಲಿ ನಡೆಯಿತು. ಗುರುಮೂರ್ತಿ ಮನೆಯಲ್ಲಿ ಶತರುದ್ರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಆರಾಧನಾ ಕಾರ್ಯಕ್ರಮಗಳನ್ನು ಋತ್ವಿಜರು ನಡೆಸಿಕೊಟ್ಟರು.

  300x250 AD


  ಸಂಜೆ ಬೆಂಗಳೂರಿನ ಪ್ರತಿಮಾ ಅತ್ರೇಯ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಗಣೇಶ ಗುಂಡಕಲ್, ಹಾರ್ಮೋನಿಯಂದಲ್ಲಿ ಪ್ರಕಾಶ ಹೆಗಡೆ ಸಹಕಾರ ನೀಡಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್ ಹೆಗಡೆ ಬೊಮ್ಮನಳ್ಳಿ ಇತರರು ಇದ್ದರು.

  Share This
  300x250 AD
  300x250 AD
  300x250 AD
  Back to top